ಗುಂಡು ಹೊಡೆದು, ಕತ್ತು ಕೊಯ್ದು ರೀತಿಯಲ್ಲಿ 3 ಹಸುಗಳ ಹತ್ಯೆ..!

ಕೊಡಗು: ಮೂರು ಹಸುಗಳನ್ನು ಗುಂಡು ಹೊಡೆದು ಹಾಗೂ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಗೋಣಿಕೊಪ್ಪದ ತಿತಿಮತಿ ಸಮೀಪದ ದೇವರಪುರ ಪಂಚಾಯಿತಿಗೆ ಒಳಪಡುವ ಹೆಬ್ಬಾಲೆ ಕಾಯಂಬೆಟ್ಟ ಎಸ್ಟೇಟ್ ನಲ್ಲಿ ನಡೆದಿದೆ. ಮೂರು ಹಸುಗಳ ಮೃತದೇಹ…

cow-vijayaprabha-news

ಕೊಡಗು: ಮೂರು ಹಸುಗಳನ್ನು ಗುಂಡು ಹೊಡೆದು ಹಾಗೂ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಗೋಣಿಕೊಪ್ಪದ ತಿತಿಮತಿ ಸಮೀಪದ ದೇವರಪುರ ಪಂಚಾಯಿತಿಗೆ ಒಳಪಡುವ ಹೆಬ್ಬಾಲೆ ಕಾಯಂಬೆಟ್ಟ ಎಸ್ಟೇಟ್ ನಲ್ಲಿ ನಡೆದಿದೆ. ಮೂರು ಹಸುಗಳ ಮೃತದೇಹ ಈ ರೀತಿ ಪತ್ತೆಯಾಗಿದ್ದು, ಮಾಂಸಕ್ಕಾಗಿ ಈ ಕೃತ್ಯ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಹೌದು, ಮೂರು ಹಸುಗಳ ಮೃತದೇಹ ಗುಂಡು ಹೊಡೆದು ಹಾಗೂ ಕತ್ತು ಕೊಯ್ದು ರೀತಿಯಲ್ಲಿ ಪತ್ತೆಯಾಗಿದ್ದು, ಕಟುಕರು ಹಸುವಿನ ಕಳೇಬರಹವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಸ್ಥಳೀಯರು ಎಸ್ಟೇಟ್‌ನ ಒಳಗೆ ಗುಂಡಿನ ಸದ್ದು ಕೇಳಿ ಬಂದಿದೆ ಎಂದು ಆರೋಪಿಸಿದ್ದು, ಮಾಂಸಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲದಿನಗಳಿಂದ ದೇವರಪುರ ತಿತಿಮತಿ ಭಾಗದಲ್ಲಿ ಹಸುಗಳ ಕಳವು ಕೂಡ ಹೆಚ್ಚಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.