ಜಿಲೆಟಿನ್ ಸ್ಫೋಟ: ಅಕ್ರಮ ಗಣಿಗಾರಿಕೆ ಬೆಂಬಲಿಸೋ ರಾಜಕಾರಣಿಗಳ ಮನುಷ್ಯತ್ವವನ್ನು ಪ್ರಶ್ನಿಸಿದ ಸುಮಲತಾ ಅಂಬರೀಷ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಹೀರೆನಾಗವೇಲಿಯಲ್ಲಿ ಜಿಲೆಟಿನ್ ದುರಂತ ಸಂಭವಿಸಿ 6 ಜನ ಮೃತಪಟ್ಟಿದ್ದು, ಇಂತಹ ದಾರುಣ ಘಟನೆಯ ನಂತರವೂ ಅಕ್ರಮ ಗಣಿಗಾರಿಕೆಯನ್ನು ಬೆಂಬಲಿಸೋ ರಾಜಕಾರಣಿಗಳ ಮನುಷ್ಯತ್ವವನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಹಿರಿಯ ನಟಿ, ಸಂಸದೆ ಸುಮಲತಾ…

sumalatha-ambareesh-vijayaprabha-news

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಹೀರೆನಾಗವೇಲಿಯಲ್ಲಿ ಜಿಲೆಟಿನ್ ದುರಂತ ಸಂಭವಿಸಿ 6 ಜನ ಮೃತಪಟ್ಟಿದ್ದು, ಇಂತಹ ದಾರುಣ ಘಟನೆಯ ನಂತರವೂ ಅಕ್ರಮ ಗಣಿಗಾರಿಕೆಯನ್ನು ಬೆಂಬಲಿಸೋ ರಾಜಕಾರಣಿಗಳ ಮನುಷ್ಯತ್ವವನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಈ ಕುರಿತು ಸಂಸದೆ ಸುಮಲತಾ, ಯಾರೇ ಅಡ್ಡಗಾಲು ಹಾಕಿದರೂ, ನನ್ನ ನಡೆ ಸತ್ಯದ ಕಡೆ ಮಾತ್ರ. ಅದು ಎಷ್ಟೇ ಕಷ್ಟವಾದರೂ ಸರಿ, ನೀವು ನನ್ನ ಗೆಲ್ಲಿಸಿ ಕಳಿಸಿದ್ದು ಸತ್ಯದ ಪರವಾಗಿ ಧ್ವನಿ ಎತ್ತಲು ಎಂದು ಹೇಳಿದ್ದು, ಪಟ್ಟಭದ್ರ ಹಿತಾಸಕ್ತಿಗಳ ನೂರು ದಾಳಕ್ಕೂ ನಾನು ಹಿಂಜರಿಯೋಲ್ಲ. ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ.

ಇಂತಹ ದಾರುಣ ಘಟನೆಯ ನಂತರವೂ ಅಕ್ರಮ ಗಣಿಗಾರಿಕೆಯನ್ನು ಬೆಂಬಲಿಸೋ ರಾಜಕಾರಣಿಗಳ ಮನುಷ್ಯತ್ವವನ್ನು ಪ್ರಶ್ನಿಸಬೇಕಾಗುತ್ತದೆ. ಶಿವಮೊಗ್ಗದಲ್ಲಿ ನಡೆದ ದುರ್ಘಟನೆ ಮರೆಯುವ ಮುನ್ನ ಮತ್ತೊಂದು ದುರಂತ ಸಂಭವಿಸಿದೆ. ಅಕ್ರಮ ಗಣಿಗಾರಿಕೆ ಜೀವ ವಿರೋಧಿ ಎಂದು ಸಂಸದೆ ಸುಮಲತಾ ಅವರು ಹೇಳಿದ್ದಾರೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.