ತುಮಕೂರು ಸೇರಿದಂತೆ ಹಲವೆಡೆ ಕುರಿ, ಮೇಕೆಗಳಿಗೆ ಸಾಂಕ್ರಾಮಿಕ ಹಿರೇಬೇನೆ (ಪಿಪಿಆರ್) ಎಂಬ ವೈರಾಣು ರೋಗ ಹರಡುತ್ತಿದ್ದು ಕುರಿಗಾಹಿಗಳ ನಿದ್ದೆಗೆಡಿಸಿದೆ. ಈ ರೋಗ ಕುರಿ, ಮೇಕೆಗಳ ದೇಹ ಹೊಕ್ಕ ಕೆಲವೇ ದಿನಗಳಲ್ಲಿ ಬಾಯಿಯಲ್ಲಿ ಹುಣ್ಣು, ಜ್ವರ, ರಕ್ತಬೇಧಿ, ಕಣ್ಣಿನಲ್ಲಿ ಪಿಸರು, ಕೆಮ್ಮು ತರಿಸಿ ಕುರಿಗಳ ಜೀವಕ್ಕೇ ಕುತ್ತು ತರಲಿದ್ದು, ಒಂದರಿಂದ ಮತ್ತೊಂದು ಕುರಿಗೆ ಸುಲಭವಾಗಿ ಹರಡುತ್ತದೆ. ಹೀಗಾಗಿ ಕುರಿಗಾಹಿಗಳು ಸಂತೆಗಳನ್ನು ಆದಷ್ಟು ತಪ್ಪಿಸಿ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಪಶುಸಂಗೋಪನಾ ಇಲಾಖೆ ತಿಳಿಸಿದೆ.
ಕುರಿಗಳಿಗೆ ಹಿರೇಬೇನೆ; ವೈದ್ಯರು ತಿಳಿಸಿದ ಮನೆ ಮದ್ದು
ಸಾಂಕ್ರಾಮಿಕ ಹಿರೇಬೇನೆ(ಪಿಪಿಆರ್) ರೋಗದಿಂದ ಕುರಿಗಳು ಸಾವನ್ನಪ್ಪುತ್ತಿದ್ದು ಇದಕ್ಕೆ ವೈದ್ಯರು ಸಲಹೆ ಹೀಗಿದ್ದು, ಪಶು ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ಕೊಡಿಸುವ ಜತೆಗೆ ನಾಲಿಗೆ, ಒಸಡು, ಮೂಗನ್ನು ಅಡುಗೆ ಸೋಡ ಬೆರೆಸಿದ ನೀರಿನಿಂದ ದಿನಕ್ಕೆ 2 ಬಾರಿ ಸ್ವಚ್ಛಗೊಳಿಸಬೇಕು.
ನಂತರ ಬೋರಾಕ್ಸ್ ಪುಡಿಯನ್ನು ಜೇನು ತುಪ್ಪದೊಂದಿಗೆ ಬೆರೆಸಿ ವಸಡಿಗೆ ಸವರಬೇಕು. ನೆರಳಿನಲ್ಲಿಯೇ ಕುರಿಗಳನ್ನು ಕಟ್ಟಿ ಹಾಕಬೇಕು. ರಾಗಿ ಗಂಜಿ, ಸೊಲ್ಲು ನೀಡಬೇಕು. ಮೃದು ಆಹಾರ ಬೆಲ್ಲ ಮಿಶ್ರಿತ ನೀರು ಕುಡಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನು ಓದಿ: ಒಳ್ಳೆಯ ಸುದ್ದಿ: ರೈತರ ಬ್ಯಾಂಕ್ ಖಾತೆಗೆ ಮತ್ತೆ 2 ಸಾವಿರ!; ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ..? ಪರಿಶೀಲಿಸಿ