ಮುಂಬೈ : ಪ್ರಸಕ್ತ ವರ್ಷದ “ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ’ ಪ್ರಕಟಗೊಂಡಿದ್ದು, ಉತ್ತಮ ನಟಿಯಾಗಿ ಬಾಲಿವುಡ್‌ನ ದೀಪಿಕಾ ಪಡುಕೋಣೆ ಹಾಗು ಅಕ್ಷಯ್ ಕುಮಾರ್ ಅವರಿಗೆ ಉತ್ತಮ ನಟ ಪ್ರಶಸ್ತಿ ಸಿಕ್ಕಿದೆ.
ಪ್ರಸಕ್ತ ವರ್ಷದ 2021ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಯು ಉತ್ತಮ ನಟ, ನಟಿ, ಉತ್ತಮ ಸಿನಿಮಾ, ಉತ್ತಮ ಸಂಗೀತಗಾರ ಸೇರಿದಂತೆ ಹಲವು ಕೆಟಗರಿಗಳಲ್ಲಿ ನಟ ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ಸುಶ್ಮಿತಾ ಸೇನ್, ಬಾಬಿ ಡಿಯೋಲ್, ನೊರಾ ಫತೇಹಿ, ಸುಶಾಂತ್ ಸಿಂಗ್ ರಜಪೂತ್ ಸೇರಿದಂತೆ ಹಲವರಿಗೆ ಪ್ರಶಸ್ತಿ ಒಲಿದಿದೆ.
ಚಪಾಕ್ ಸಿನಿಮಾದ ನಟನೆಗಾಗಿ, ಉತ್ತಮ ನಟಿಯಾಗಿ ದೀಪಿಕಾ ಪಡುಕೋಣೆ, ಉತ್ತಮ ನಟನಾಗಿ ಅಕ್ಷಯ್ (ಲಕ್ಷ್ಮಿ), ವಿಮರ್ಶಕರ ಉತ್ತಮ ನಟಿಯಾಗಿ ಕಿಯಾರಾ ಅಡ್ವಾಣಿ (ಗಿಲ್ಟಿ), ವಿಮರ್ಶಕರ ಉತ್ತಮ ನಟನಾಗಿ ಇತ್ತೀಚಿಗೆ ನಿಧನರಾದ ಸುಶಾಂತ್ ಸಿಂಗ್ ರಜಪೂತ (ಚಿಚೋರೆ), ಉತ್ತಮ ಚಿತ್ರವಾಗಿ ತಾನಾಜಿ, ಉತ್ತಮ ವಿದೇಶಿ ಫೀಚರ್ ಚಿತ್ರವಾಗಿ ಪ್ಯಾರಾಸೈಟ್, ಉತ್ತಮ ನಿರ್ದೇಶಕರಾಗಿ ಅನುರಾಗ್ ಬಸು (ಲುಡೋ) ಆಯ್ಕೆಯಾಗಿದ್ದಾರೆ.