ಕರಬೂಜ ಹಣ್ಣು ಸೇವನೆಯಿಂದ ಆಯಾಸ ದೂರ:
* ವಿಟಮಿನ್ ಎ, ಬೀಟಾ ಕೆರೋಟಿನ್ ಕರಬೂಜ ಹಣ್ಣಿನಲ್ಲಿದ್ದು, ಕಣ್ಣಿನ ಪೊರೆ ಸಮಸ್ಯೆಯನ್ನು ತಡೆಯುತ್ತದೆ.
* ಕರಬೂಜ ಹಣ್ಣಿನಲ್ಲಿರುವ ಅಧಿಕ ಪೊಟಾಶಿಯಂ ತೂಕ ಕರಗಿಸಲು ಸಹಾಯ ಮಾಡುತ್ತದೆ.
* ಕರಬೂಜ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಸರ್ ಗೂ ಇದು ಒಳ್ಳೆಯದು.
* ಕರಬೂಜ ಹಣ್ಣು ನಿದ್ರಾ ಸಂಬಂಧಿತ ತೊಂದರೆಗಳನ್ನು ದೂರ ಮಾಡುತ್ತದೆ.
* ಕರಬೂಜ ಹಣ್ಣು ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚುವಂತೆ ಮಾಡುವುದಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳಿಗೂ ಪ್ರಯೋಜನಕಾರಿ.
ಹಸಿ ಶುಂಠಿಯಿಂದ ತಲೆಹೊಟ್ಟು ನಿವಾರಣೆ:
ಶುಂಠಿಯನ್ನು ಸ್ವಚ್ಛವಾಗಿ ತೊಳೆದು ಸಣ್ಣದಾಗಿ ಕತ್ತರಿಸಿ ಒಂದು ಲೋಟ ನೀರಿಗೆ ಹಾಕಿ ಕಾಲು ಲೋಟಕ್ಕಾಗುವಷ್ಟು ಕುದಿಸಿ. ಇದನ್ನು ಸೋಸಿ ಸಣ್ಣ ಬಾಟಲಿಯಲ್ಲಿ ಸಂಗ್ರಹಿ ಸ್ನಾನಕ್ಕೆ ಮುನ್ನ ಇದನ್ನು ನೆತ್ತಿಗೆ ಸಿಂಪಡಿಸಿ ಅಥವಾ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ತಲೆಗೆ ಹಚ್ಚಿಕೊಳ್ಳುವಾಗ ಇದನ್ನು ಬೆರೆಸಿ. ಇದನ್ನು ಹಚ್ಚಿಕೊಂಡ ಅರ್ಧ ಗಂಟೆ ಬಳಿಕ ಸ್ನಾನ ಮಾಡಿ. ವಿಪರೀತ ತುರಿಕೆ ಇದ್ದರೆ ವಾರಕ್ಕೊಮ್ಮೆ ಈ ಔಷಧವನ್ನು ಬಳಸಬಹುದು.