ದಾವಣಗೆರೆ : ದಾವಣಗೆರೆಯ 10 ಕುಟುಂಬಗಳ ದಿವ್ಯ ನಂದಾದೀಪಗಳನ್ನು ಹಾರಿಸಿರುವ ಹಾಗು ಸಂಕ್ರಮಣ ಸಂಭ್ರಮವನ್ನು ಕತ್ತಲಾಗಿಸಿರುವ ಧಾರವಾಡ ಬಳಿಯ ರಾಷ್ಟೀಯ ಹೆದ್ದಾರಿ ವಿರುದ್ಧ ಹೋರಾಟ ಆರಂಭವಾಗಿದೆ.
ಕಳೆದ ಜನವರಿ 15 ರಂದು ಧಾರವಾಡದ ಇಟಿಗಟ್ಟಿ ಬಳಿಯ ರಾಷ್ಟೀಯ ಹೆದ್ದಾರಿ 4 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಾವಣಗೆರೆಯ 13 ಜನ ಗೆಳತಿಯರು ಮೃತ ಪಟ್ಟಿದ್ದರು. ಈಗ ಈ ಘಟನೆಗೆ ಕಾರಣವಾದ ರಸ್ತೆಯ ರಾಷ್ಟೀಯ ಹೆದ್ದಾರಿ ವಿರುದ್ಧ ಮೃತರ ಕುಟುಂಬಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ.
ಇದೆ ಫೆಬ್ರುವರಿ 6 ರಂದು ರಸ್ತೆಯ ಬಗ್ಗೆ ಸರ್ಕಾರದ ನಿರ್ಲಕ್ಷ ಹಾಗು ಅಸುರಕ್ಷಿತ ನಿಯಮಗಳ ವಿರುದ್ದ ಸರ್ಕಾರದ ವೈಫಲ್ಯಗಳನ್ನ ಜನತೆಗೆ ತಿಳಿಸುವ ಸಂಬಂಧ ದಾವಣಗೆರೆಯಿಂದ ಅಪಘಾತ ನಡೆದ ಸ್ಥಳದ ವರೆಗೆ ಮೃತರ ಕುಟುಂಬಸ್ಥರು ಜಾಥಾ ನಡೆಸಲು ನಿರ್ಧರಿಸಿದ್ದಾರೆ. ಅಂದು ಬೆಳಗ್ಗೆ 7 ಗಂಟೆಗೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಜಾಥಾ ಆರಂಭವಾಗಲಿದೆ.
ಈ ಜಾತಾಕ್ಕೆ ದಾವಣಗೆರೆ, ಹುಬ್ಬಳ್ಳಿ, ಧಾರವಾಡ ನಾಗರಿಕರು ಸಾಥ್ ನೀಡಲಿದ್ದು, ಮೃತ ಮಹಿಳೆ ಪತಿ ಡಾ। ರವಿಕುಮಾರ್, ಡಾ| ರಮೇಶ್ ಹಾಗು ಉದ್ಯಮಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಜಾಥಾ ನಡೆಯಲಿದೆ. ಅಪಘಾತಕ್ಕೆ ಕಾರಣವಾದ ರಸ್ತೆಯ ವಿರುದ್ಧ ಇವರು ಪ್ರತಿಭಟನೆಯನ್ನು ನಡೆಸಲಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಜಗತ್ತಿಗೆ ತೆರೆದಿಡುವ ಹಾಗು ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಜಾಗೃತಿ ಮೂಡಿಸವುದು ಈ ಜಾಥದ ಉದ್ದೇಶ.
ಕಳೆದ ಜನವರಿ 15 ರಂದು ದಾವಣಗೆರೆಯಿಂದ ಗೋವಾಕ್ಕೆ ಹೊರಟಿದ್ದ 13 ಜನ ಮಹಿಳೆಯರು ದಾರವಾಡದ ಇಟಿಗಟ್ಟಿ ಬಳಿಯ ರಾಷ್ಟೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಇದನ್ನು ಓದಿ: ಭೀಕರ ಅಪಘಾತ: ಸಂಕ್ರಾಂತಿ ಪ್ರಯುಕ್ತ ದಾವಣಗೆರೆಯಿಂದ ಗೋವಾಕ್ಕೆ ತೆರಳುತ್ತಿದ್ದ 13 ಜನರ ದುರ್ಮರಣ; ಉಳಿದವರ ಸ್ಥಿತಿ ಗಂಭೀರ




