ಬಿಯರ್ ಕುಡಿಯುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮ ಎಂದು ಹಲವು ಅಧ್ಯಯನಗಳು ಖಚಿತಪಡಿಸಿವೆ. ಮಹಿಳೆಯರು 1 ಪೆಗ್, ಪುರುಷರಿಗೆ ದಿನಕ್ಕೆ 2 ಪೆಗ್ ಮಿತವಾದ ಪಾನೀಯ ಎಂದು ಪರಿಗಣಿಸಲಾಗುತ್ತದೆ.ಇದು ಹೆಚ್ಚಾದರೆ, ಅಧಿಕ ರಕ್ತದೊತ್ತಡ & ಮೂತ್ರಪಿಂಡದ ಸಮಸ್ಯೆ ಎದುರಾಗುತ್ತದೆ.
ಬಿಯರ್ ಕುಡಿಯುವುದರಿಂದ ಬೇಗ ನಿದ್ರೆಗೆ ಜಾರಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ.
ಬಿಯರ್ ಸೇವಿಸಿ ರಾತ್ರಿ ಬೇಗ ನಿದ್ರೆ ಬಂದರೂ ದಿನದ ಸಮಯದಲ್ಲಿ ಏಕಾಗ್ರತೆ ಕೊರತೆ, ಆಯಾಸ ಆಗುವಂತೆ ಮಾಡುತ್ತದೆ.
ಬಿಯರ್‌ನಲ್ಲಿ ಆಲ್ಕೋಹಾಲ್ ಅಂಶ ಕಡಿಮೆ ಇರುತ್ತದೆ. ಆದರೆ, ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು ಇರುತ್ತವೆ.
ಹೆಚ್ಚಾದ ಕ್ಯಾಲೋರಿಗಳು ಹೊಟ್ಟೆಯ ಮಧ್ಯಭಾಗದಲ್ಲಿ ಶೇಖರಣೆ ಆಗಲು ಪ್ರಾರಂಭ ಮಾಡುತ್ತವೆ. ಅಧಿಕ ಕ್ಯಾಲೋರಿಯಿಂದ ಬೊಜ್ಜಿನ ಅಂಶ ಹೆಚ್ಚಾಗಿ ಹೊಟ್ಟೆ ದಪ್ಪ ಆದಂತೆ ಕಾಣುತ್ತದೆ.
ಅತಿಯಾಗಿ ಬಿಯರ್ ಕುಡಿಯುವುದರಿಂದ ಹೃದಯದ ಮಾಂಸಖಂಡಗಳು, ರಕ್ತನಾಳಗಳು ಹಾನಿಯಾಗಿ ಹೃದಯ ದುರ್ಬಲವಾಗುತ್ತದೆ, ವಾರಕ್ಕೆ ಎರಡು ಬಾರಿ ಕುಡಿಯುವವರಿಗೆ ಈ ಸಮಸ್ಯೆಗಳು ತಪ್ಪಿದ್ದಲ್ಲ.
ಇದನ್ನು ಓದಿ: ಪದೇ ಪದೇ ನಿಮ್ಮ ಕಿವಿ ನೋವು ಕಾಡುತ್ತಿದೆಯೇ? ಆಗಿದ್ದರೆ ಈ ಮನೆ ಮದ್ದನ್ನು ಪಾಲಿಸಿ