ದೇಹದ ದುರ್ಬಲತೆ,ಅಶಕ್ತಿಗೆ ಉತ್ತಮ ಮನೆ ಔಷದಿ:
1. ಶಕ್ತಿ ವರ್ಧಕ : ತುಳಸೀ ಬೀಜ ಶಕ್ತಿವರ್ಧಕ, ತಂಪು, ವೃಣ ನಿವಾರಕ, ಬೀಜವನ್ನು ನುಣ್ಣಗೆ ಅರೆದು, ಹಳೆಬೆಲ್ಲ ಹಾಕಿ, ಬೋರೆ ಹಣ್ಣಿನ ಗಾತ್ರದ ಉಂಡೆ ಮಾಡಿ ದಿನಾಲೂ ಸೇವಿಸಿದರೆ, ಶಕ್ತಿ ವೃದ್ಧಿಯಾಗಿ ಮನಸ್ಸು ಉಲ್ಲಸಿತವಾಗುತ್ತದೆ.
2. ಒಂದೆಲಗದ ಲೇಹ್ಯವನ್ನು ಮಕ್ಕಳಿಗೆ ಕೊಟ್ಟರೆ ಅದು ಪುಷ್ಟಿಕರ.ಶಕ್ತಿವರ್ದಕ,
3. ದೇಹಕ್ಕೆ ಬಹಳ ಸುಸ್ತು ಎನಿಸಿದಾಗ ಜೇನುತುಪ್ಪವನ್ನು ನೀರಿನ ಜೊತೆಗೆ ವಿಷಮ ಪ್ರಮಾಣದಲ್ಲಿ 1:3 ಸೇವಿಸುವುದರಿಂದ ಸುಸ್ತು ಪರಿಹಾರವಾಗುವುದು.
4. ರಸಬಾಳೇಹಣ್ಣಿನ ಜೊತೆ ಸಕ್ಕರೆ, ತುಪ್ಪ ಸೇರಿಸಿ ದಿನಾಲೂ ತಿಂದರೆ ಪುಷ್ಟಿಕರವಾಗಿರುತ್ತದೆ. ನೇಂದ್ರಬಾಳೇ ಹಣ್ಣನ್ನು ಸಹ ಇದೇ ರೀತಿ ತಿಂದರೂ ಒಳ್ಳೆಯದು. ಬಾಳೆಹಣ್ಣು, 1 ಹೋಳು ಸೇಬು, ಬೆರಳುದ್ದದ ಕ್ಯಾರೆಟ್, 4-6 ನೆಲಗಡಲೆ ಇವುಗಳನ್ನು ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿ ಹಾಲು ಸಕ್ಕರೆ ಬೆರೆಸಿ ಕುಡಿದರೆ ಆರೋಗ್ಯಕ್ಕೆ ಹಿತಕರವಾಗಿರುತ್ತದೆ.
5. 3/4 ಲೋಟ ಗರಿಕೆ ರಸವನ್ನು ಪ್ರಾತಃ ಕಾಲದಲ್ಲಿ ಖಾಲಿ ಹೊಟ್ಟೆಗೆ ಸೇವಿಸಿದರೆ ದುರ್ಬಲತೆ ನಿವಾರಣೆಯಾಗುವುದು. ಈ ರೀತಿ 1 ತಿಂಗಳು ಸೇಪಸಿದರೆ ಪರಿಣಾಮಕಾರಿ.
6. ನೆಲ್ಲಿ ಕಾಯಿ ರಸ 2 ಚಮಚ, 1 ಚಮಚ ಕಲ್ಲುಸಕ್ಕರೆ ಪುಡಿ, ಬೆರೆಸಿ ತೆಗೆದುಕೊಂಡರೆ ಪರಿಣಾಮಕಾರಿ. ನೆಲ್ಲಿ ಬೀಜ ನೀರಿಗೆ ಹಾಕಿದರೆ ನೀರಿನ ಕಲ್ಕರ ನಿವಾರಣೆಯಾಗಿ ಸ್ವಚ್ಛವಾಗುವುದು.
7. 4-6 ಬೆಳ್ಳುಳ್ಳಿ ಬೇಳೆ ತುಪ್ಪದಲ್ಲಿ ಹುರಿದು ಬೆಲ್ಲ ಹಾಕಿ ನಿತ್ಯ ಬೆಳಿಗ್ಗೆ ರಾತ್ರಿ ತಿಂದರೆ ನಿಶ್ಯಕ್ತಿ ದೂರವಾಗುತ್ತದೆ.
ಇದನ್ನು ಓದಿ: ಹೃದ್ರೋಗ, ಎದೆ ಬೇನೆಗೆ ಪಾಲಿಸಬೇಕಾದ ಮನೆಮದ್ದು