ಮುಂಬೈ : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಸಚಿವ ವಿಲಾಸ್ ಕಾಕಾ ಪಾಟೀಲ್ ಉಂಡಲ್ಕರ್(85) ಅವರು ಸೋಮವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸತಾರಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ತಮ್ಮ 85ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ವಿಲಾಸ್ ಕಾಕಾ ಪಾಟೀಲ್ ಉಂಡಲ್ಕರ್ ಅವರು ಕಾಂಗ್ರೆಸ್ ಸಿದ್ಧಾಂತಕ್ಕೆ ನಿಷ್ಠಾವಂತ ನಾಯಕರಾಗಿದ್ದರು. 12 ವರ್ಷಗಳವರೆಗೆ ಸಚಿವರಾಗಿದ್ದ ಅವರು ಕರಾಡ್ ದಕ್ಷಿಣ ಕ್ಷೇತ್ರವನ್ನು ಸತತ 35 ವರ್ಷಗಳವರೆಗೆ ಪ್ರತಿನಿಧಿಸಿದ್ದರು.
.
ವಿಲಾಸ್ ಕಾಕಾ ಪಾಟೀಲ್ ಉಂಡಲ್ಕರ್ ಅವರು 7 ಬಾರಿ ಕರಾಡ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಸಹಕಾರ, ಡೈರಿ ಅಭಿವೃದ್ಧಿ, ಪಶುಸಂಗೋಪನೆ, ಪರಿಹಾರ ಮತ್ತು ಪುನರ್ವಸತಿ ಸಚಿವರಾಗಿದ್ದರು. ವಿಲಾಸ್ ಕಾಕಾ ಪಾಟೀಲ್ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.