ರೂಪಾಂತರ ಕರೋನಾ ವೈರಸ್ ಅನ್ನು ಲಸಿಕೆಗಳು ನಿಯಂತ್ರಿಸಬಲ್ಲವು; ಪ್ರೊಫೆಸರ್ ಕೆ ವಿಜಯ್ ರಾಘವನ್

ನವದೆಹಲಿ: ಯುಕೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ವಿಶ್ವದಾದ್ಯಂತದ ಪ್ರಮುಖ ಫಾರ್ಮಾ ಕಂಪನಿಗಳು ತಯಾರಿಸಿದ ಲಸಿಕೆಗಳು ಹೊಸ ಕರೋನಾ ರೂಪಾಂತರವನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಯುಕೆ…

ನವದೆಹಲಿ: ಯುಕೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ವಿಶ್ವದಾದ್ಯಂತದ ಪ್ರಮುಖ ಫಾರ್ಮಾ ಕಂಪನಿಗಳು ತಯಾರಿಸಿದ ಲಸಿಕೆಗಳು ಹೊಸ ಕರೋನಾ ರೂಪಾಂತರವನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಯುಕೆ ಮತ್ತು ದಕ್ಷಿಣ ಆಫ್ರಿಕಾದ ಹಳೆಯ ಕರೋನಾ ವೈರಸ್‌ಗಾಗಿ ತಯಾರಿಸಿದ ಲಸಿಕೆಯಲ್ಲಿ ಹೊಸ ಕರೋನಾ ವೈರಸ್‌ ನಿಯಂತ್ರಿಸುವ ಪ್ರತಿರೋಧ ಶಕ್ತಿ ಇಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊಫೆಸರ್ ಕೆ.ಎಸ್. ವಿಜಯ್ ರಾಘವನ್ ತಿಳಿಸಿದ್ದಾರೆ.

ಹೆಚ್ಚಿನ ಪ್ರಮಾಣದ ಕರೋನಾ ವೈರಸ್‌ಗಳು ಲಸಿಕೆಯಲ್ಲಿನ ಪ್ರೋಟೀನ್‌ನ ಮೇಲೆ ಆಕ್ರಮಣ ಮಾಡುತ್ತವೆ, ಆ ಸಮಯದಲ್ಲಿ ವೈರಸ್ ಅದರ ಆನುವಂಶಿಕ ಸಂಕೇತದ ಆಧಾರದ ಮೇಲೆ ಹೊಸ ವೈರಸ್ ಬದಲಾವಣೆಗಳಿಗೆ ಒಳಗಾಗುತ್ತದೆ. ಆದರೆ ಕರೋನಾ ಲಸಿಕೆ ಇಮ್ಯುನಿಟಿ ಸಿಸ್ಟಮ್ ಹೆಚ್ಚಿಸಲು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ರೂಪಾಂತರ ಕರೋನ ವೈರಸ್ನ ಬದಲಾವಣೆಗಳಿಂದಾಗಿ ಈಗಾಗಲೇ ಅಭಿವೃದ್ಧಿ ಪಡಿಸಿದ ಕರೋನ ಲಸಿಕೆ ಕಾರ್ಯನಿರ್ವಹಿಸುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಜಯ್ ರಾಘವನ್ ಸ್ಪಷ್ಟನೆ ನೀಡಿದ್ದಾರೆ.

Vijayaprabha Mobile App free

ಕೋವಿಡ್-19 ವೈರಸ್‌ಗಳಿಗಿಂತ ವೇಗವಾಗಿ ಹರಡುವ ನಿರೀಕ್ಷೆಯಿರುವ ರೂಪಾಂತರ ಕರೋನಾ ವೈರಸ್ ಈಗಾಗಲೇ ಯುಕೆ ಮತ್ತು ದಕ್ಷಿಣ ಆಫ್ರಿಕಾಕ್ಕೆ ಹರಡಿದ್ದು, ಇದರ ಲಕ್ಷಣಗಳು ಈಗ ಲಂಡನ್ ಮತ್ತು ಇಂಗ್ಲೆಂಡ್‌ಗೆ ಹರಡಿವೆ ಎಂದು ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.