ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ RSSನ ಹುನ್ನಾರ: ಕಿಡಿಕಾರಿದ ದಿನೇಶ್ ಗುಂಡೂರಾವ್

ಬೆಂಗಳೂರು: ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ RSSನ ಹುನ್ನಾರ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಕುರಿತು ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದೂ , ಯಾಂತ್ರೀಕೃತ ಕೃಷಿ…

dinesh gundu rao vijayaprabha

ಬೆಂಗಳೂರು: ಗೋಹತ್ಯೆ ನಿಷೇಧ ರೈತರನ್ನು ಬಲಿಪಶು ಮಾಡುವ RSSನ ಹುನ್ನಾರ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ಕುರಿತು ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮಾಡಿದ್ದೂ , ಯಾಂತ್ರೀಕೃತ ಕೃಷಿ ಅನಿವಾರ್ಯವಾಗಿರುವ ಕಾಲದಲ್ಲಿ ಪಶು ಸಂಗೋಪನೆ ರೈತರ ಪಾಲಿನ ಹೊರೆ. ಇಂದು ದೇಶದಲ್ಲಿ ನಾಟಿ ದನಗಳನ್ನು ಸಾಕುವ ರೈತರೆಷ್ಟಿದ್ದಾರೆ? ಹೊಸ ಕಾಯ್ದೆ ಪ್ರಕಾರ ಹಾಲಿಗಾಗಿ, ಉಳುಮೆಗಾಗಿ ಗೋಸಾಗಾಣಿಕೆ ಮಾಡಬೇಕೆಂದರೂ ಅನುಮತಿ ಬೇಕು. ಹೀಗಿರುವಾಗ ರೈತ ಗೋವು ಸಾಕುವುದ್ದೇಗೆ?

ಗೋ ಹತ್ಯೆ ನಿಷೇಧ ಕಾನೂನಿನಿಂದ ಬಿಡಾಡಿ ದನಗಳ ಸಂಖ್ಯೆ ಜಾಸ್ತಿಯಾಗಲಿವೆ. ಉ.ಪ್ರ.ದಲ್ಲಿ ರೈತರು ಹಸು ಸಾಕುವುದನ್ನು ನಿಲ್ಲಿಸಿದರಿಂದ 6 ವರ್ಷದಲ್ಲಿ 10 ಲಕ್ಷ ಗೋವುಗಳ ಸಂಖ್ಯೆ ಕಡಿಮೆಯಾಗಿದೆ. ವಿಪರ್ಯಾಸವೆಂದರೆ ಇದೇ ಅವಧಿಯಲ್ಲಿ 25ಸಾವಿರ ಕೋಟಿ ಗೋ ಮಾಂಸ ರಫ್ತಾಗಿದೆ. ಗೋ ಹತ್ಯೆ ತಡೆಯುವುದಾದರೆ ಗೋ ಮಾಂಸ ರಫ್ತಿಗೂ ನಿಷೇಧ ಹೇರಬೇಕಲ್ಲವೆ?

Vijayaprabha Mobile App free

BJP ಸರ್ಕಾರ ರೈತರಿಗೆ ಮಾರಕ ಕಾಯ್ದೆಗಳ ಮೂಲಕ ಹಂತ ಹಂತವಾಗಿ ವಿಶಪ್ರಾಸನ ಮಾಡುತ್ತಿದೆ. ಗೋಹತ್ಯೆ ನಿಷೇಧ ಕಾನೂನು ಕೂಡ ರೈತರ ಕತ್ತು ಹಿಸುಕುವುದು ಖಚಿತ. ನಾಟಿ ದನಗಳಂತೆ ಮುರ್ರಾ,ಜೆರ್ಸಿ ಹಾಗೂ ಮಿಶ್ರತಳಿಯ ದನಗಳಿಗೆ ರೋಗ ನಿರೋಧಕ ಶಕ್ತಿಯಿಲ್ಲ. 13 ವರ್ಷದೊಳಗಿನ ರೋಗಗ್ರಸ್ತ ದನಗಳನ್ನು ಬಿಜೆಪಿ ನಾಯಕರ ಮನೆ ಮುಂದೆ ಕಟ್ಟಿ ಹಾಕಿ ಬರಬೇಕೆ? ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.