ಬೆಂಗಳೂರು: ರಾಜಧಾನಿಯಲ್ಲಿ ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಮೆಟ್ರೋ ಅವಲಂಬಿಸಿರುವ ಲಕ್ಷಾಂತರ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ‘ನಮ್ಮ ಮೆಟ್ರೋ’ (Namma Metro) ಪ್ರಯಾಣ ದರವನ್ನು ಹೆಚ್ಚಳ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕೃತ ಆದೇಶ ಹೊರಡಿಸಿದೆ.
ಮೆಟ್ರೋ ಟಿಕೆಟ್ ಏರಿಕೆಗೆ ಕಾರಣವೇನು?

ಹೌದು, ಮೆಟ್ರೋ ನಿರ್ವಹಣಾ ವೆಚ್ಚದಲ್ಲಿ (Maintenance Cost) ವಿಪರೀತ ಏರಿಕೆಯಾಗಿದ್ದು, ಈ ನಷ್ಟವನ್ನು ಸರಿದೂಗಿಸಲು ಪ್ರಯಾಣ ದರವನ್ನು ಏರಿಕೆ ಮಾಡುವುದು ಅನಿವಾರ್ಯ ಎಂದು BMRCL ತಿಳಿಸಿದೆ. ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಟಿಕೆಟ್ ದರದಲ್ಲಿ ಶೇ. 5 ರಷ್ಟು ಹೆಚ್ಚಳವಾಗಲಿದೆ.
ಇದನ್ನೂ ಓದಿ: Gold Price Crash | ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ; ಆಭರಣ ಪ್ರಿಯರಿಗೆ ಇಂದು ಹಬ್ಬ!
ಮೆಟ್ರೋ ಟಿಕೆಟ್ ಹೊಸ ದರ ಯಾವಾಗ ಜಾರಿ?
ಅಷ್ಟೇ ಅಲ್ಲ,, ಈಗಾಗಲೇ ಹೊರಡಿಸಲಾಗಿರುವ ಆದೇಶದ ಪ್ರಕಾರ ಇದೇ ತಿಂಗಳು ಅಂದರೆ ಫೆಬ್ರವರಿ 9 ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿದ್ದು, ಇದರಿಂದಾಗಿ ದೈನಂದಿನ ಪ್ರಯಾಣಿಕರ (Daily Commuters) ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ.
ಇದನ್ನೂ ಓದಿ: New Ration Card | ನಿಮ್ಮ ಬಳಿ ‘ಈ’ ಒಂದು ಕಾರ್ಡ್ ಇದ್ಯಾ? ಹಾಗಿದ್ರೆ ಹೊಸ ರೇಷನ್ ಕಾರ್ಡ್‌ಗೆ ಇಂದೇ ಅರ್ಜಿ ಹಾಕಿ!
ಮೆಟ್ರೋ ಟಿಕೆಟ್ ಹೊಸ ದರ ಪ್ರಮುಖ ಅಂಶಗಳು:
ಏರಿಕೆ ಪ್ರಮಾಣ: ಶೇ. 5% (5 Percent)
ಜಾರಿಯಾಗುವ ದಿನಾಂಕ: ಫೆಬ್ರವರಿ 9, 2026
ಕಾರಣ: ನಿರ್ವಹಣಾ ವೆಚ್ಚ ಹೆಚ್ಚಳ




