Govt Jobs 2026 | ಪರೀಕ್ಷೆ ಬೇಡ, ಸಂದರ್ಶನವೂ ಇಲ್ಲ! SSLC ಅಂಕಪಟ್ಟಿ ಇದ್ದರೆ ಸಾಕು, ನೇರವಾಗಿ ಸಿಗುತ್ತೆ ಸರ್ಕಾರಿ ಕೆಲಸ

Govt Jobs 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ, ಭಾರತೀಯ ಅಂಚೆ ಇಲಾಖೆ, ರೈಲ್ವೆ ಇಲಾಖೆಯಲ್ಲಿ ಒಟ್ಟು 50 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಭಾರತೀಯ ಅಂಚೆ…

SSLC Pass Govt Jobs 2026 Karnataka - India Post GDS, Railway Group D and SBI Recruitment Notification

Govt Jobs 2026: ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ, ಭಾರತೀಯ ಅಂಚೆ ಇಲಾಖೆ, ರೈಲ್ವೆ ಇಲಾಖೆಯಲ್ಲಿ ಒಟ್ಟು 50 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್‌) ಹುದ್ದೆಗಳಿಗೆ 28,740 ಹುದ್ದೆಗಳ ನೇಮಕಾತಿಗಾಗಿ ಜನವರಿ 31 ರಂದು ಅಧಿಸೂಚನೆ ಬಿಡುಗಡೆ ಮಾಡಲಿದೆ.

ಭಾರತೀಯ ಅಂಚೆ ಇಲಾಖೆ (GDS) – ಪರೀಕ್ಷೆ ಇಲ್ಲ!

SSLC Pass Govt Jobs 2026 Karnataka - India Post GDS, Railway Group D and SBI Recruitment Notification
SSLC Pass Govt Jobs 2026 Karnataka – India Post GDS, Railway Group D and SBI Recruitment Notification

ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್), ಬ್ರಾಂಚ್ ಪೋಸ್ಟ್ ಮಾಸ್ಟ‌ರ್ (ಬಿಪಿಎಂ) ಮತ್ತು ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆಗಳಿಗೆ 10ನೇ ತರಗತಿಯಲ್ಲಿ ಪಡೆದ ಅಂಕಗಳ (ಮೆರಿಟ್) ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳು 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು. ಅಧಿಸೂಚನೆ ಮತ್ತು ಅರ್ಜಿ ಸಲ್ಲಿಕೆ ಜನವರಿ 31, 2026 ರಿಂದ ಆರ೦ಭಗೊ೦ಡು ಫೆಬ್ರವರಿ 14, 2026 ರಂದು ಕೊನೆಗೊಳ್ಳುತ್ತದೆ.

Vijayaprabha Mobile App free

ಇದನ್ನೂ ಓದಿ: New Ration Card | ನಿಮ್ಮ ಬಳಿ ‘ಈ’ ಒಂದು ಕಾರ್ಡ್ ಇದ್ಯಾ? ಹಾಗಿದ್ರೆ ಹೊಸ ರೇಷನ್ ಕಾರ್ಡ್‌ಗೆ ಇಂದೇ ಅರ್ಜಿ ಹಾಕಿ

ರೈಲ್ವೆ ಇಲಾಖೆ (Group D) – 10th & ITI ಪಾಸಾದವರಿಗೆ

ಭಾರತೀಯ ರೈಲ್ವೆ ಇಲಾಖೆಯು ಗ್ರೂಪ್ D ಹುದ್ದೆಗಳಿಗೆ 22,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 31, 2026 ರಿಂದ ಫೆಬ್ರವರಿ 20, 2026 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ 10ನೇ ತರಗತಿ ಉತ್ತೀರ್ಣರಾದ ಮತ್ತು ITI ಡಿಪ್ಲೊಮಾ ಪಡೆದವರು ಅರ್ಜಿ ಸಲ್ಲಿಸಬಹುದು. ಕನಿಷ್ಠ ವಯಸ್ಸು 18 ಮತ್ತು ಗರಿಷ್ಠ 33 ವರ್ಷಗಳು, ಜನವರಿ 1, 2026 ರಿಂದ ವಯಸ್ಸು ಲೆಕ್ಕಹಾಕಲಾಗುತ್ತದೆ. ಮೀಸಲು ವರ್ಗದವರಿಗೆ ಸರ್ಕಾರಿ ನಿಯಮದಂತೆ ವಯೋಮಿತಿ ಸಡಿಲಿಕೆ ಇದೆ

ಇದನ್ನೂ ಓದಿ: Gold karat: 24, 22, 18 ಚಿನ್ನದ ಕ್ಯಾರೆಟ್‌ಗಳ ವ್ಯತ್ಯಾಸವೇನು? ಚಿನ್ನ ಖರೀದಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಎಸ್‌ಬಿಐ (SBI) – ಪದವೀಧರರಿಗೆ ಅವಕಾಶ

ಬ್ಯಾಂಕ್ ನಲ್ಲಿ ಕೆಲಸ ಮಾಡುವ ಕನಸು ಕ೦ಡಿದ್ದ ಯುವಕರಿಗೆ ಗುಡ್ ನ್ಯೂಸ್, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ 2,000 ಕ್ಕೂ ಹೆಚ್ಚು ಹುದ್ದೆಗಳಿಗೆ ಹೊಸ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ 16 ವಲಯಗಳಲ್ಲಿ ವೃತ್ತ ಆಧಾರಿತ ಅಧಿಕಾರಿಗಳನ್ನು ನೇಮಿಸಲಾಗುವುದು. ಜಾಹೀರಾತಿನ ಪ್ರಕಾರ, ಈ ನೇಮಕಾತಿಗಾಗಿ ಆನ್ನೈನ್ ಅರ್ಜಿಗಳು ಜನವರಿ 29 ರಂದು ಪ್ರಾರಂಭವಾದವು. ಅರ್ಜಿ ಸಲ್ಲಿಸುವ ವಿಂಡೋ ibpsreg.ibps.in ನಲ್ಲಿ ತೆರೆದಿರುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫಾರ್ಮ್ ಅನ್ನು ಭರ್ತಿ ಮಾಡಬಹುದು.

ಇದನ್ನೂ ಓದಿ: Nipah virus | ಮಾರಣಾಂತಿಕ ನಿಫಾ ವೈರಸ್ ಪತ್ತೆ.. ಕರ್ನಾಟಕದಲ್ಲಿ ಹೈ ಅಲರ್ಟ್..! ನಿಫಾ ವೈರಸ್‌ನ ಲಕ್ಷಣಗಳೇನು?

ಹುದ್ದೆ ಖಾಲಿ ಇರುವ ಸ್ಥಳಗಳ ವಿವರ

ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರವನ್ನು ಪ್ರಕಟಿಸಲಾಗಿದೆ. ಆಂಧ್ರ ಪ್ರದೇಶದಲ್ಲಿ 97, ಕರ್ನಾಟಕದಲ್ಲಿ 200, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ 97, ಒಡಿಶಾದಲ್ಲಿ 80, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್‌ನಲ್ಲಿ 103 ಹುದ್ದೆಗಳು ಖಾಲಿ ಇವೆ. ತಮಿಳುನಾಡು, ಪುದುಚೇರಿಯಲ್ಲಿ 165, ಗುಜರಾತ್, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯುಗಳಲ್ಲಿ 194, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರದಲ್ಲಿ 68, ತೆಲಂಗಾಣದಲ್ಲಿ 80, ರಾಜಸ್ಥಾನದಲ್ಲಿ 103 ಹುದ್ದೆಗಳು ಖಾಲಿ ಇವೆ.

ಇದನ್ನೂ ಓದಿ: Voter ID mapping | ವೋಟರ್ ಐಡಿ ‘ಮ್ಯಾಪಿಂಗ್’ ಮಾಡಿಸಿಕೊಳ್ಳದಿದ್ದರೆ ಮತದಾನದ ಹಕ್ಕು ಇಲ್ಲ?

ಸಂಬಳ ಮಾಹಿತಿ

  • ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ಸರ್ಕಲ್‌ ಬೇಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
  • ಆಯ್ಕೆಯಾದ ಅಭ್ಯರ್ಥಿಗಳಿಗೆ ₹48,480 ರಿಂದ ₹85,920 ರವರೆಗೆ ವೇತನ ಶ್ರೇಣಿ ಇರಲಿದೆ.
  • ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹750 ಅರ್ಜಿ ಶುಲ್ಕವಿದ್ದು, ಎಸ್ಸಿ/ಎಸ್ಟಿ/ಪಿಎಚ್ ಅಭ್ಯರ್ಥಿಗಳಿಗೆ ಉಚಿತ. ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ, ಸ್ಟ್ರೀನಿಂಗ್‌, ಸಂದರ್ಶನ ಮತ್ತು ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆಯನ್ನು ಒಳಗೊಂಡಿದೆ. ಆಸಕ್ತರು sbi.bank.in ಅಥವಾ ibps-reg.ibps.in ವೆಬೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply