Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » malware attack protect your data and bank account
ಪ್ರಮುಖ ಸುದ್ದಿ

ಮಾಲ್‌ವೇ‌ರ್ ದಾಳಿ: ನಿಮ್ಮ ಡೇಟಾ, ಬ್ಯಾಂಕ್‌ ಖಾತೆ ರಕ್ಷಿಸಿಕೊಳ್ಳಿ!

Malware attack | ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್ ಬಳಕೆದಾರರು ಮಾಲ್‌ವೇ‌ರ್ ದಾಳಿಯಿ೦ದ ತಮ್ಮ ಡೇಟಾ ಮತ್ತು ಬ್ಯಾಂಕ್ ಖಾತೆಗಳನ್ನು ರಕ್ಷಿಸಿಕೊಳ್ಳುವುದು ಅತ್ಯಗತ್ಯ. ಹ್ಯಾಕರ್‌ಗಳು ಮಾಲ್‌ವೇ‌ರ್ ಹರಡುವ ಮೂಲಕ ಮಾಹಿತಿ ಕದಿಯಲು ಮತ್ತು ಬ್ಯಾಂಕ್ ಖಾತೆಗಳಿಗೆ…

Author Avatar

Vijayaprabha

December 15, 20253:06 pm Bank AccountDATAMalware attackಡೇಟಾಬ್ಯಾಂಕ್ ಖಾತೆಮಾಲ್‌ವೇ‌ರ್ ದಾಳಿ
Malware attack

Malware attack | ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್ ಬಳಕೆದಾರರು ಮಾಲ್‌ವೇ‌ರ್ ದಾಳಿಯಿ೦ದ ತಮ್ಮ ಡೇಟಾ ಮತ್ತು ಬ್ಯಾಂಕ್ ಖಾತೆಗಳನ್ನು ರಕ್ಷಿಸಿಕೊಳ್ಳುವುದು ಅತ್ಯಗತ್ಯ. ಹ್ಯಾಕರ್‌ಗಳು ಮಾಲ್‌ವೇ‌ರ್ ಹರಡುವ ಮೂಲಕ ಮಾಹಿತಿ ಕದಿಯಲು ಮತ್ತು ಬ್ಯಾಂಕ್ ಖಾತೆಗಳಿಗೆ ನಷ್ಟ ಉ೦ಟುಮಾಡಲು ಪ್ರಯತ್ನಿಸುತ್ತಾರೆ. ಮಾಲ್ ವೇರ್‌ನಿಂದ ನಿಮ್ಮ ಸಾಧನಗಳನ್ನು ಸುರಕ್ಷಿತವಾಗಿರಿಸಲು ಕೆಲವು ಪರಿಣಾಮಕಾರಿ ಸಲಹೆಗಳ ಮಾಹಿತಿ ಇಲ್ಲಿದೆ.

ಸಾಮಾನ್ಯ ಮಾದರಿಯ ಮಾಲ್‌ವೇರ್‌ಗಳು

ವೈರಸ್ ಗಳು ಡೇಟಾವನ್ನು ನಕಲಿಸಿ, ಸಿಸ್ಟಮ್‌ಗೆ ಹಾನಿ ಮಾಡಬಹುದು. ವರ್ಮ್‌ಗಳು ದುರುದ್ದೇಶಪೂರಿತವಾಗಿ ಇತರ ಕಂಪ್ಯೂಟರ್‌ಗಳಿಗೆ ನಕಲುಗಳನ್ನು ಕಳುಹಿಸುತ್ತವೆ. ಸ್ಟ್ವೇರ್ ಬಳಕೆದಾರರ ಅರಿವಿಲ್ಲದೆ ಸೂಕ್ಷ್ಮ ಡೇಟಾವನ್ನು ಸಂಗ್ರಹಿಸುತ್ತದೆ. Adware ಸ್ವಯಂಚಾಲಿತವಾಗಿ ಜಾಹೀರಾತುಗಳನ್ನು ಡೌನ್‌ಲೋಡ್ ಮಾಡುತ್ತದೆ. ಟ್ರೋಜನ್ ಹಾರ್ಸ್‌ಗಳು ಸ್ಥಾಪನೆಯಾದ ನಂತರ ಹಾನಿ ಮಾಡುವುದಲ್ಲದೆ, ಮಾಹಿತಿಯನ್ನು ಕದಿಯಬಲ್ಲವು.

ಹೇಗೆ ಹರಡುತ್ತವೆ?

ಮಾಲ್‌ವೇರ್‌ಗಳು ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ಗಳಿಗೆ ಹಲವು ರೀತಿಯಲ್ಲಿ ಪ್ರವೇಶಿಸಬಹುದು. ಉಚಿತ ಸಾಫ್ಟ್‌ವೇರ್‌ಗಳ ಮೂಲಕ, ಸಾಫ್ಟ್‌ವೇರ್‌ಗಳ ಗುಂಪುಗಳೊಂದಿಗೆ, ಹಾನಿಗೊಳಗಾದ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ, ನಕಲಿ ಎರರ್ ಮೆಸೇಜ್‌ಗಳು ಅಥವಾ ಪಾಪಪ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ, ಹಾಗೂ ಮಾಲ್‌ವೇ‌ರ್ ಇರುವ ಇಮೇಲ್ ಅಟ್ಯಾಚ್ ಮೆಂಟ್‌ಗಳನ್ನು ತೆರೆಯುವ ಮೂಲಕ ಇವು ಹರಡುತ್ತವೆ. ಆದರೆ, ಈ ಮಾಲ್‌ವೇರ್‌ಗಳ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿದೆ.

Vijayaprabha Mobile App free

ತಡೆಗಟ್ಟುವುದು ಹೇಗೆ?

ನಿಮ್ಮ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಹಾಗೂ ಅವುಗಳಲ್ಲಿನ ಸಾಫ್ಟ್‌ವೇರ್‌ಗಳನ್ನು ನಿಯಮಿತವಾಗಿ ಅಪ್‌ಡೇಟ್ ಮಾಡುವುದು ಅತ್ಯಗತ್ಯ. ಕೆಲವು ಆಪರೇಟಿಂಗ್ ಸಿಸ್ಟಂಗಳು ಬಹು ಖಾತೆಗಳನ್ನು ಬಳಸಲು ಅವಕಾಶ ನೀಡುತ್ತವೆ, ಇದರಿಂದ ಪ್ರತಿ ಖಾತೆಗೆ ಪ್ರತ್ಯೇಕ ಸೆಟ್ಟಿಂಗ್‌ಗಳನ್ನು ಮಾಡಿಕೊಳ್ಳಬಹುದು. ಸುರಕ್ಷತೆಗಾಗಿ, ನಾನ್-ಅಡ್ಮಿನಿಸ್ಟ್ರೇಟರ್ ಖಾತೆಗಳನ್ನು ಬಳಸಲು ಸಲಹೆ ನೀಡಲಾಗಿದೆ

ನಿಮ್ಮ ಮಾಹಿತಿ ಸುರಕ್ಷಿತವಿರಲಿ

ಯಾವುದೇ ಲಿಂಕ್ ಕ್ಲಿಕ್ ಮಾಡುವ ಮೊದಲು, ಸಾಫ್ಟ್ ವೇರ್ ಅಥವಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು ಪರಿಶೀಲಿಸಿ ಮತ್ತು ಯೋಚಿಸಿ. ಇಮೇಲ್ ಹಾಗೂ ಇಮೇಜ್‌ ಅಟ್ಯಾಚ್‌ಮೆಂಟ್‌ಗಳನ್ನು ತೆರೆಯುವಾಗ ಎಚ್ಚರದಿಂದಿರಿ. ಪಾಪ್‌ಅಪ್ ವಿಂಡೋಗಳು ಮತ್ತು ಸಾಫ್ಟ್‌ವೇ‌ರ್ ಡೌನ್‌ಲೋಡ್ ಮಾಡಲು ಕೇಳುವ ಲಿಂಕ್‌ಗಳನ್ನು ನಂಬಬೇಡಿ. ನಿಮ್ಮ ಫೈಲ್‌ಗಳನ್ನು ಹಂಚಿಕೊಳ್ಳುವುದನ್ನು ಮಿತಿಗೊಳಿಸಿ ಮತ್ತು ಆಂಟಿವೈರಸ್ ಸಾಫ್ಟ್‌ವೇರ್‌ಗಳನ್ನು ಬಳಸಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

Girl with Bullets: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಬಳಿ 750 ಜೀವಂತ ಗುಂಡುಗಳು ಪತ್ತೆ!

By Devaraj Naik October 24, 2024
#ट्रेंडिंग हैशटैग:Bank AccountDATAMalware attackಡೇಟಾಬ್ಯಾಂಕ್ ಖಾತೆಮಾಲ್‌ವೇ‌ರ್ ದಾಳಿ

Post navigation

Previous Previous post: ಅಣಬೆ ಕೃಷಿ: ಗ್ರಾಮೀಣ ಪ್ರದೇಶದಲ್ಲಿ ತಿಂಗಳಿಗೆ 50 ಸಾವಿರ ಗಳಿಸಿ
Next Next post: Rashi bhavishya | ಮಂಗಳವಾರದ ರಾಶಿ ಭವಿಷ್ಯ, 16 ಡಿಸೆಂಬರ್ 2025

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By