Cold wave | ಹವಾಮಾನ ಇಲಾಖೆಯು ಕೆಲವು ರಾಜ್ಯಗಳಲ್ಲಿ ಶೀತಗಾಳಿ ಎಚ್ಚರಿಕೆಯನ್ನು ನೀಡಿದ್ದು, ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಿಗೆ ಇಲಾಖೆಯು ಶೀತಗಾಳಿ ರೆಡ್ ಅಲರ್ಟ್ ಅನ್ನು ನೀಡಿದೆ.
ಹೌದು, ಮುಂದಿನ ಕೆಲವು ದಿನಗಳವರೆಗೆ ಛತ್ತೀಸ್ಗಢ & ಜಾರ್ಖಂಡ್ನಲ್ಲಿ ಶೀತಗಾಳಿ ಬೀಸುವ ಮುನ್ಸೂಚನೆ ನೀಡಿದೆ. ಹರಿಯಾಣ ಮತ್ತು ಮಧ್ಯ ಮಹಾರಾಷ್ಟ್ರದ ಬಯಲು ಪ್ರದೇಶಗಳಲ್ಲಿ ರಾತ್ರಿ ತಾಪಮಾನವು 4 ಡಿಗ್ರಿ ಸೆಲ್ಸಿಯಸ್ಗೆ ಇಳಿಯಬಹುದು. ರಾಜ್ಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿ ಚಳಿಗಾಲ ಶುರುವಾಗಿದೆ. ಕೆಲವು ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
ರಾಜ್ಯದಲ್ಲಿ ಹವಾಮಾನ ಬದಲಾವಣೆ..

ಸಾಮಾನ್ಯವಾಗಿ ನವೆಂಬರ್ ಮೊದಲ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ಚಳಿಗಾಲ ಆರಂಭವಾಗುತ್ತದೆ. ಆದರೆ ಈ ಬಾರಿ ಮಳೆಯೇ ಸುದೀರ್ಘ ಕಾಲ ಮುಂದುವರಿದಿದ್ದು, ವಾಡಿಕೆಗಿಂತ ಚಳಿಗಾಲ ಸ್ಪಲ್ಪ ತಡವಾಗಿ ಶುರುವಾಗಿದೆ.
ಬೆಂಗಳೂರು ನಗರ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾನೆ ಮಂಜು ಬೀಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮಂಜು, ಚಳಿಯ ಪ್ರಮಾಣ ಇನ್ನೂ ಹೆಚ್ಚಾಗಿದೆ. ಮಧ್ಯ ಕರ್ನಾಟಕ & ಕಲ್ಯಾಣ ಕರ್ನಾಟಕದಲ್ಲಿಯೂ ಚಳಿ ಜಾಸ್ತಿ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ರಾಜ್ಯದಲ್ಲಿ ಚಳಿಯ ಅನುಭವ
- ವಿಜಯಪುರ = 12.0c
- ದಾವಣಗೆರೆ = 13.0c
- ಚಿಂತಾಮಣಿ = 13.0c
- ಬೀದರ್ = 13.8c
- ಚಿತ್ರದುರ್ಗ = 14.6c
- ಧಾರವಾಡ = 15.0c
- ಗದಗ = 15.6c
- ಹಾವೇರಿ = 15.8c
- ಮಂಡ್ಯ = 16.1c
- ಬೆಂಗಳೂರು ನಗರ = 16.2c




