ಬೆಂಗಳೂರು : ರಾಜ್ಯ ಕೆ ಎಸ್ ಆರ್ ಟಿಸಿ ಕರ್ನಾಟಕ ಮತ್ತು ಅನ್ಯ ರಾಜ್ಯಗಳಿಗೆ ಹಾಗು ರಾಜ್ಯದ ಪ್ರತಿ ಹಳ್ಳಿಗಳಿಗೂ ಸರಕು ಮತ್ತು ಪತ್ರಗಳನ್ನು ಕೊಂಡೊಯ್ಯಲು ಕೆಎಸ್ಆರ್‌ಟಿಸಿ ಕೊರಿಯರ್ ಸೇವೆ ಜಾರಿಗೆ ತರಲು ನಿರ್ಧರಿಸಿದ್ದು, ಈ ಯೋಜನೆಯಿಂದ ಕರೋನದಿಂದ ಸಂಕಷ್ಟಕ್ಕೀಡಾಗಿರುವ ಕೆ ಎಸ್ ಆರ್ ಟಿಸಿ ಗೆ ಅನುಕೂಲವಾಗಲಿದ್ದು, ಈ ಯೋಜನೆ ಹೊಸ ವರ್ಷಕ್ಕೆ ಜಾರಿಗೊಳ್ಳಲಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಇದುವರೆಗೆ ಸಾಕಷ್ಟು ಕೊರಿಯರ್ ವ್ಯವಸ್ಥೆಗಳಿದ್ದು, ಇವುಗಳಿಗೆ ಸೆಡ್ಡು ಹೊಡೆಯಲು, ಕಡಿಮೆ ದರದಲ್ಲಿ, ಕೆಎಸ್ಆರ್‌ಟಿಸಿ ಕೊರಿಯರ್ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿರುವ ಕೆ ಎಸ್ ಆರ್ ಟಿಸಿ ಗ್ರಾಮೀಣ ಪ್ರದೇಶದ ಜನರನ್ನು ಗುರಿಯಾಗಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಾರಸುದಾರರಿದ್ದರೆ ಮಾತ್ರ ತಮ್ಮ ಪಾರ್ಸೆಲ್ ಒಯ್ಯಲು ಅವಕಾಶ ಇತ್ತು. ಸದ್ಯಕ್ಕೆ ರಾಜ್ಯದೊಳಗೆ ಸಂಚರಿಸುವ ಬಸ್‌ಗಳಲ್ಲಿ ಈ ಸೇವೆ ಜಾರಿಗೊಳ್ಳಳಿದ್ದು, ಕೊರಿಯರ್ ಸೇವೆ ಆರಂಬಿಸಿವ ಉದ್ದೇಶದಿಂದ ಈಗಾಗಲೇ ಟೆಂಡರ್ ಕರೆದಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಇನ್ನು ಈ ಯೋಜನೆಯಿಂದ ಉದ್ಯೋಗ ಸೃಷ್ಟಿ ಕೂಡ ಆಗಲಿದೆ ಎಂದು ನಿರೀಕ್ಷಿಸಿದ್ದು, ಕೊರಿಯರ್ ನಿರ್ವಹಣೆಗೆ ಸಿಬ್ಬಂದಿ ನೇಮಕಾತಿಯನ್ನು ಟೆಂಡರ್ ಪಡೆದುಕೊಂಡಿರುವ ಪ್ರಾಂಚೈಸಿ ಮಾಡಿಕೊಳ್ಳುತ್ತದೆ. ಇನ್ನು ಕೆ ಎಸ್ ಆರ್ ಟಿಸಿ ಕೊರಿಯರ್ ವ್ಯವಸ್ಥೆಯಲ್ಲಿ ತಮ್ಮ ಸರಕುಗಳ ಮಾಹಿತಿಯನ್ನು ಆಪ್ ಮೂಲಕ ಟ್ರ್ಯಾಕ್ ಮಾಡಬಹುದು.