PF withdrawal | ಪಿಎಫ್ , ಪೆನ್ಷನ್ ಹಣ ಹಿಂಪಡೆಯುವ ನಿಯಮ; ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ವಿರೋಧ

ಹೊಸದಿಲ್ಲಿ: ಕೇಂದ್ರ ಸರ್ಕಾರವು ಕಾರ್ಮಿಕರು ಕೆಲಸ ಕಳೆದುಕೊಂಡ ಬಳಿಕ ತಮ್ಮ ಪಿಎಫ್ ಹಣ ಹಿಂಪಡೆಯಲು12 ತಿಂಗಳು, ಪೆನ್ಷನ್ ಹಣ ಪಡೆಯಲು ಕೆಲಸ ಕಳೆದುಕೊಂಡ 36 ತಿಂಗಳವರೆಗೂ ಕಾಯಬೇಕೆಂದು ಆದೇಶ ಹೊರಡಿಸಿದೆ. ಇದರ ಬಗ್ಗೆ ಕಾರ್ಮಿಕರು…

PF withdrawal

ಹೊಸದಿಲ್ಲಿ: ಕೇಂದ್ರ ಸರ್ಕಾರವು ಕಾರ್ಮಿಕರು ಕೆಲಸ ಕಳೆದುಕೊಂಡ ಬಳಿಕ ತಮ್ಮ ಪಿಎಫ್ ಹಣ ಹಿಂಪಡೆಯಲು12 ತಿಂಗಳು, ಪೆನ್ಷನ್ ಹಣ ಪಡೆಯಲು ಕೆಲಸ ಕಳೆದುಕೊಂಡ 36 ತಿಂಗಳವರೆಗೂ ಕಾಯಬೇಕೆಂದು ಆದೇಶ ಹೊರಡಿಸಿದೆ. ಇದರ ಬಗ್ಗೆ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಹೌದು ಕೇಂದ್ರ ಸರಕಾರವು ಭವಿಷ್ಯ ನಿಧಿ(ಪಿಎಫ್)ಯ ಅಂತಿಮ ಇತ್ಯರ್ಥದ ಅವಧಿಯನ್ನು ಎರಡು ತಿಂಗಳಿನಿಂದ 12 ತಿಂಗಳುಗಳಿಗೆ ಹೆಚ್ಚಿಸಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಸದಸ್ಯರು ಉದ್ಯೋಗವನ್ನು ಕಳೆದುಕೊಂಡ 12 ತಿಂಗಳುಗಳ ಬಳಿಕವಷ್ಟೇ ತಮ್ಮ ಭವಿಷ್ಯ ನಿಧಿ ಖಾತೆಗಳಿಂದ ಪೂರ್ಣ ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಲು ಸಾಧ್ಯ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಸೋಮವಾರ ಪ್ರಕಟಿಸಿದೆ.

Vijayaprabha Mobile App free

ಇದೇ ರೀತಿ ಸದಸ್ಯರು 36 ತಿಂಗಳುಗಳ ನಂತರವಷ್ಟೇ ಪಿಂಚಣಿ ಖಾತೆಗಳಿಂದ ಹಣವನ್ನು ಹಿಂಪಡೆಯಬಹುದು. ಪ್ರಸ್ತುತ ಉದ್ಯೋಗವನ್ನು ಕಳೆದುಕೊಂಡ ಎರಡು ತಿಂಗಳುಗಳ ಬಳಿಕ ಅಂತಿಮ ಪಿಂಚಣಿ ಹಿಂಪಡೆಯಲು ಅವಕಾಶವಿದೆ.

ಹಾಲಿ ನಿಯಮಗಳಡಿ ಕನಿಷ್ಠ ಒಂದು ತಿಂಗಳು ನಿರುದ್ಯೋಗಿಯಾಗಿರುವ ಇಪಿಎಫ್‌ಒ ಸದಸ್ಯ ತನ್ನ ಭವಿಷ್ಯ ನಿಧಿ ಮೊತ್ತದ ಶೇ.75ರವರೆಗೆ ಹಿಂಪಡೆಯಲು ಅವಕಾಶವಿದೆ. ಸತತ ಎರಡು ತಿಂಗಳುಗಳ ಕಾಲ ನಿರುದ್ಯೋಗಿಗಳಾಗಿ ಉಳಿದುಕೊಂಡವರು ಪೂರ್ಣ ಮೊತ್ತವನ್ನು ಹಿಂಪಡೆಯಬಹುದು.

ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ನೇತೃತ್ವದ ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಯೋಜನೆಗೆ ತಿದ್ದುಪಡಿಯನ್ನು ತರಲು ಸೋಮವಾರ ನಿರ್ಧರಿಸಿದೆ.ಸದಸ್ಯರು ತಮ್ಮ ಪಿಎಫ್ ಖಾತೆಗಳಲ್ಲಿ ‘ಎಲ್ಲ ಸಮಯದಲ್ಲಿಯೂ’ ಶೇ.25ರಷ್ಟು ಮೊತ್ತವನ್ನು ಕನಿಷ್ಠ ಬ್ಯಾಲೆನ್ಸ್ ಆಗಿ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ಸಚಿವಾಲಯವು ಸಭೆಯ ಬಳಿಕ ಹೇಳಿಕೆಯಲ್ಲಿ ತಿಳಿಸಿದೆ.

ಇದು ಸದಸ್ಯರು ಇಪಿಎಫ್‌ಒ ನೀಡುವ ಹೆಚ್ಚಿನ ಬಡ್ಡಿಯನ್ನು(ಪ್ರಸ್ತುತ ವಾರ್ಷಿಕ ಶೇ.8.25) ಗಳಿಸುವ ಜೊತೆಗೆ ಹೆಚ್ಚಿನ ಮೊತ್ತದ ನಿವೃತ್ತಿ ನಿಧಿಯನ್ನು ಪಡೆದುಕೊಳ್ಳಲು ಚಕ್ರಬಡ್ಡಿಯ ಲಾಭವನ್ನು ಪಡೆಯುವುದನ್ನು ಸಾಧ್ಯವಾಗಿಸುತ್ತದೆ ಎಂದು ಸಚಿವಾಲಯವು ತಿಳಿಸಿದೆ.

ಹೊಸ ಮಾರ್ಗಸೂಚಿಗಳು ಟೀಕೆಗೆ ಗುರಿಯಾಗಿದ್ದು, ಇತ್ಯರ್ಥಕ್ಕಾಗಿ ಹೆಚ್ಚಿನ ಅವಧಿಯು ಉದ್ಯೋಗವನ್ನು ಕಳೆದುಕೊಂಡವರಿಗೆ ಮತ್ತು ತಮ್ಮ ಹಣದ ತಕ್ಷಣದ ಅಗತ್ಯವುಳ್ಳವರಿಗೆ ತೊಂದರೆಗಳನ್ನುಂಟು ಮಾಡುತ್ತದೆ ಎನ್ನುವುದು ಅನೇಕರ ಅಭಿಪ್ರಾಯ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.