Tungabhadra Dam gate | ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ 33 ಗೇಟ್ಗಳನ್ನು ನವೆಂಬರ್ನಿಂದ ಬದಲಾಯಿಸುವ ಕಾರ್ಯ ಆರಂಭವಾಗಲಿದೆ.
ಹೌದು, ತುಂಗಭದ್ರಾ ಜಲಾಶಯ 4 ಜಿಲ್ಲೆಗಳ ಜೀವನಾಡಿ. ಈ ಜೀವನಾಡಿ ಇದೀಗ ಅಪಾಯದಂಚಿನಲ್ಲಿದೆ. ಕಳೆದ ವರ್ಷ ಒಂದು ಗೇಟ್ ಕಿತ್ತುಕೊಂಡು ಹೋಗಿತ್ತು. ಸದ್ಯ ಆ ಗೇಟ್ನ್ನು ತಾತ್ಕಾಲಿಕವಾಗಿ ಅಳವಡಿಕೆ ಮಾಡಲಾಗಿದೆ. ಸರ್ಕಾರ ಜಲಾಶಯದ ಗೇಟ್ ಯಾವಾಗ ಬದಲಾವಣೆ ಮಾಡುತ್ತೆ ಎಂದು ಕಾದು ಕುಳಿತ್ತಿದ್ದ ರೈತರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ.
ನವೆಂಬರ್ನಿಂದ ಜಲಾಶಯದ ಗೇಟ್ ಬದಲಾವಣೆ ಕಾರ್ಯ ಆರಂಭವಾಗಲಿದೆ. ಇದರೊಂದಿಗೆ ನದಿ ಪಾತ್ರದ ಜನರಿಗೆ ಮತ್ತು ರೈತರಿಗೆ ದೊಡ್ಡ ಅಪಾಯವೊಂದು ತಪ್ಪಿದಂತಾಗಲಿದೆ.
ಇನ್ನು, ಸಚಿವ ಶಿವರಾಜ್ ತಂಗಡಗಿ ಅವರು ಗೇಟ್ ಬದಲಾವಣೆ ಕಾರ್ಯ ಆರಂಭವಾಗುವ ಬಗ್ಗೆ ತಿಳಿಸಿದ್ದರೂ, ಈ ಬಾರಿ ಕೇವಲ ಒಂದು ಬೆಳೆಗೆ ಮಾತ್ರ ನೀರು ಸಿಗಲಿದೆ ಎಂದು ಹೇಳಿದ್ದಾರೆ. ಇದರಿಂದ ರೈತರು ಆತಂಕಗೊಂಡಿದೆ.




