Sachin Tendulkar : ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ BCCIನ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂಬ ವರದಿಗಳು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಈ ಬಗ್ಗೆ ಸಚಿನ್ ಸ್ಪಷ್ಟನೆ ನೀಡಿದ್ದಾರೆ
ಹೌದು, BCCI ಹೊಸ ಅಧ್ಯಕ್ಷರನ್ನು ಹುಡುಕುತ್ತಿದೆ. 2022 ರಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತದ್ದ ರೋಜರ್ ಬಿನ್ನಿಗೆ 70 ವರ್ಷ ತುಂಬಿದ ಕಾರಣ ಈ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಕಾರ್ಯದರ್ಶಿ ದೇವಜಿತ್ ಹಂಗಾಮಿ ಅಧ್ಯಕ್ಷರಾಗಿ ಮಂಡಳಿಯನ್ನು ಮುನ್ನಡೆಸುತ್ತಿದ್ದಾರೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಖಾಲಿಯಾಗಿರುವBCCI ಅಧ್ಯಕ್ಷರ ಹುದ್ದೆಯನ್ನು ವಹಿಸಿಕೊಳ್ಳಬಹುದು ಎಂದು ಕೆಲವು ವರದಿ ಹೇಳಿವೆ.
ಇದೀಗ ಎದ್ದಿರುವ ಊಹಪೋಹಗಳಿಗೆ ತೆರೆ ಎಳೆದಿರುವ ಸಚಿನ್ ನಾನು ಅಧ್ಯಕ್ಷ ಹುದ್ದೆಯೆ ಸ್ಪರ್ಧಿ ಅಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಅವರ ಒಡೆತನದ SRT ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಈ ಕುರಿತು ಪ್ರಕಟಣೆ ಹೊರಡಿಸಿದೆ. ‘ಸಚಿನ್ಗೆ ಸಂಬಂಧಿಸಿದಂತೆ ಕೆಲವು ವರದಿಗಳು ಮತ್ತು ವದಂತಿಗಳು ನಮ್ಮ ಗಮನಕ್ಕೆ ಬಂದಿವೆ. ಅವೆಲ್ಲವೂ ಸುಳ್ಳು. ದಯವಿಟ್ಟು ಊಹಾಪೋಹಗಳನ್ನು ಹರಡಬೇಡಿ’ ಎಂದು ಕೇಳಿಕೊಂಡಿದ್ದಾರೆ.




