Gauri-Ganesh festival : ವಿಘ್ನ ವಿನಾಶಕ, ಮೂಷಿಕ ವಾಹನ ಗಣಪನ ಸ್ವಾಗತಕ್ಕೆ ನಾಡಿನಾದ್ಯಂತ್ಯ ಸಕಲ ರೀತಿಯಲ್ಲಿ ಸಿದ್ಧತೆಗಳು ನಡೆದಿವೆ. ಮೋದಕ ಪ್ರಿಯ ಗಣಪ ನಾಳೆ ಭಕ್ತರ ಮನೆ ಮನೆಗೆ ಆಗಮಿಸಲಿದ್ದಾನೆ. ಮುನ್ನಾ ದಿನವಾದ ಇಂದು ಮಾತೆ ಗೌರಿಯನ್ನು ಭಕ್ತರು ಸಂಭ್ರಮದಿಂದ ಬರಮಾಡಿಕೊಳ್ಳುವ ತಯಾರಿಯಲ್ಲಿ ತೊಡಗಿದ್ದಾರೆ.
ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

- ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಬಾರದು.
- ಗಣೇಶನ ಮೂರ್ತಿಯನ್ನು ನೇರವಾಗಿ ಖಾಲಿ ನೆಲದ ಮೇಲೆ ಇಡಬಾರದು
- ಗಣೇಶನ ಮೂರ್ತಿಯನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಪ್ರತಿಷ್ಠಾಪನೆ ಮಾಡಬೇಕು. ಸಾಧ್ಯವಾಗದಿದ್ದರೆ ಉತ್ತರ ದಿಕ್ಕಿಗೆ ಇಡಬಹುದು.
- ಮುರಿದ ಅಥವಾ ತುಂಡಾದ ಗಣೇಶನ ವಿಗ್ರಹವನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಬಾರದು.
- ಗಣೇಶನಿಗೆ ತುಳಸಿ ದಳಗಳನ್ನು ಮತ್ತು ಕೇದಿಗೆ ಹೂವುಗಳನ್ನು ಅರ್ಪಿಸುವುದು ನಿಷಿದ್ಧವಾಗಿದೆ.
- ಗಣಪತಿಯನ್ನು ವಿಧಿ – ವಿಧಾನಗಳ ಪ್ರಕಾರ ವಿಸರ್ಜನೆ ಮಾಡಬೇಕು
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



