ವಿಜಯನಗರ : ಇಂದು ಸರ್ಕಾರದ ಕಾರ್ಯದರ್ಶಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ನಡೆದ ವೀಡಿಯೋ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಎಂ.ಎಸ್. ದಿವಾಕರ ಭಾಗವಹಿಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷಾ ಕಾರ್ಯವನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುತ್ತಿದೆ ಈ ಸಮೀಕ್ಷಾ ಕಾರ್ಯಕ್ಕೆ ಮಾಸ್ಟರ್ ಟ್ರೈನರ್ಸ್, ಮೇಲ್ವಿಚಾರಕರು, ಹಾಗೂ ಗಣಿತೀದಾರರ ಅಗತ್ಯವಿದೆ ಈ ಹಿನ್ನೆಲೆಯಲ್ಲಿ ಸಮೀಕ್ಷಾ ಕಾರ್ಯಕ್ಕೆ ಜಿಲ್ಲೆಗೆ 50 ಮಾಸ್ಟರ್ ಟ್ರೈನರ್ಸ್‌ಗಳನ್ನು ಗೊತ್ತುವಡಿಸಿಕೊಳ್ಳುವುದು.

ಸಮೀಕ್ಷೆಗೆ ಅಗತ್ಯವಿರುವ ಶಿಕ್ಷಕರು ಮತ್ತು ಎಲ್ಲಾ ಇಲಾಖೆಗಳು, ನಿಗಮ/ಮಂಡಳಿಗಳಿಂದ ಗಣಿತೀದಾರರ ಮಾಹಿತಿಯನ್ನು ಪಡೆದುಕೊಳ್ಳುವುದು ಈ ಕಾರ್ಯಕ್ಕಾಗಿ ಪ್ರತಿ 150 ಮನೆಗಳಿಗೆ ಒಬ್ಬ ಗಣತೀದಾರರನ್ನು ಹಾಗೂ ಪ್ರತಿ 20 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಲು ಪಟ್ಟಿಯನ್ನು ಸಿದ್ಧವಡಿಸಿಕೊಳ್ಳುವುದು ಸಮೀಕ್ಷಾ ಕಾರ್ಯಕ್ಕಾಗಿ ಅಗತ್ಯವಿರುವ ಇನ್ನಿತರೇ ಎಲ್ಲಾ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವ ಸಂಬಂಧ ಚರ್ಚಿಸಲಾಯಿತು.



