Rini Ann George : ಕೇರಳದ ಯುವ ರಾಜಕಾರಣಿಯೊಬ್ಬರು ತನಗೆ ಅಶ್ಲೀಲ ಮೆಸೇಜ್ಗಳನ್ನು (ಆಕ್ಷೇಪಾರ್ಹ ಸಂದೇಶ) ಕಳುಹಿಸಿ ಹೋಟೆಲ್ಗೆ ಬರುವಂತೆ ಕೇಳಿಕೊಂಡಿದ್ದರು ಎಂದು ಮಲಯಾಳಂ ನಟಿ ರಿನಿ ಆನ್ ಜಾರ್ಜ್ (Rini Ann George) ಆರೋಪಿಸಿದ್ದಾರೆ.
ಹೌದು, ಕೇರಳದ ಮುಂಚೂಣಿ ರಾಜಕೀಯ ಪಕ್ಷವೊಂದರ ಯುವ ನಾಯಕನೊಬ್ಬ ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದು, ನನ್ನೊಂದಿಗೆ ದುರ್ವರ್ತನೆ ತೋರಿದ್ದಾರೆ ಎಂದು ಮಲಯಾಳಂನ ನಟಿ ರಿನಿ ಆನ್ ಜಾರ್ಜ್ ಆರೋಪಿಸಿದ್ದು, “ನನ್ನ ಈ ಹೇಳಿಕೆಯ ಬೆನ್ನಲ್ಲೇ ನನ್ನ ವಿರುದ್ಧ ಆನ್ ಲೈನ್ ದಾಳಿ ನಡೆಯುತ್ತಿದ್ದು, ಈ ಬೆದರಿಕೆ ಹೀಗೆಯೇ ಮುಂದುವರಿದಲ್ಲಿ ನಾನು ನಾಯಕನ ಹೆಸರು ಬಹಿರಂಗಪಡಿಸುತ್ತೇನೆ” ಎಂದು ರಿನಿ ಆನ್ ಜಾರ್ಜ್ ಹೇಳಿದ್ದಾರೆ.
ಕಳೆದ ಮೂರು ವರ್ಷಗಳಿಂದ ತಮಗೆ ಇಂತಹ ಮೆಸೇಜ್ಗಳು ಬರುತ್ತಿವೆ ಎಂದಿರುವ ನಟಿ, ‘ನನ್ನ ಮೇಲೆ ಯಾವುದೇ ದೌರ್ಜನ್ಯ ನಡೆದಿಲ್ಲ, ಆದರೆ ಅನೇಕರು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಕೇಳಿದ್ದೇನೆ. ನಾನು ಅವರ ಪರವಾಗಿ ಮಾತನಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ನಟಿ ನಟಿ ರಿನಿ ಆನ್ ಜಾರ್ಜ್ ಯಾರನ್ನೂ ಹೆಸರಿಸದಿದ್ದರೂ ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟತಿಲ್ ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿದೆ.




