ನಟ ದರ್ಶನ್ ಫ್ಯಾನ್ಸ್​​ಗೆ ಖುಷಿ ಸುದ್ದಿ.. ಡೆವಿಲ್‌ ಸಿನಿಮಾದ ಬಿಗ್‌ ಅಪ್ಡೇಟ್‌

Actor Darshan Devil movie : ನಟ ದರ್ಶನ್ ಕೊಲೆ ಆರೋಪದಲ್ಲಿ ಮತ್ತೆ ಜೈಲು ಸೇರಿದ ಬಳಿಕ ಅವರ ಮುಂಬರುವ ಚಿತ್ರದ ಪ್ರಚಾರವನ್ನೇ ಚಿತ್ರತಂಡ ನಿಲ್ಲಿಸಿತ್ತು. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಡೆವಿಲ್‌ ಸಿನಿಮಾ…

Actor Darshan Devil movie

Actor Darshan Devil movie : ನಟ ದರ್ಶನ್ ಕೊಲೆ ಆರೋಪದಲ್ಲಿ ಮತ್ತೆ ಜೈಲು ಸೇರಿದ ಬಳಿಕ ಅವರ ಮುಂಬರುವ ಚಿತ್ರದ ಪ್ರಚಾರವನ್ನೇ ಚಿತ್ರತಂಡ ನಿಲ್ಲಿಸಿತ್ತು. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಡೆವಿಲ್‌ ಸಿನಿಮಾ ರಿಲೀಸ್‌ಗಾಗಿ ಜನ ಕಾಯುತ್ತಿದ್ದಾರೆ.

ಆದರೆ ಈ ನಡುವೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಸಂದೇಶ ಎನ್ನಲಾದ ವಿಜಯಲಕ್ಷ್ಮಿ ಕಡೆಯಿಂದ ಬಂದ ಪೋಸ್ಟ್ ಬಳಿಕ ಫ್ಯಾನ್ಸ್ ಡೆವಿಲ್ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದೀಗ ಸಿನಿಮಾ ತಂಡ, ಚಿತ್ರದ ಪ್ರಚಾರ ಪ್ರಕ್ರಿಯೆಗಳನ್ನು ಪುನಃ ಶುರುಮಾಡಿದೆ. ಡೆವಿಲ್‌ ಸಿನಿಮಾದ ಮೊದಲ ಹಾಡಿನ ರಿಲೀಸ್ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಇದೇ ಭಾನುವಾರ ಚಿತ್ರದ ಮೊದಲ ಹಾಡು `ಇದ್ರೆ ನೆಮ್ದಿಯಾಗ್ ಇರ್ಬೇಕ್’ ಹಾಡನ್ನ ಇದೇ ಆಗಸ್ಟ್ 24ಕ್ಕೆ ಬಿಡುಗಡೆ ಮಾಡೋದಾಗಿ ಹೇಳಿ ಹೊಸ ಡೇಟ್ ಅನೌನ್ಸ್ ಮಾಡಿದೆ.

Vijayaprabha Mobile App free

ಈ ಹಾಡು ನಟ ದರ್ಶನ್ ಮತ್ತೆ ಅರೆಸ್ಟ್ ಆದ ಮರು ದಿನವೇ ರಿಲೀಸ್ ಆಗುವುದಿತ್ತು. ಆದರೆ ದರ್ಶನ್‌ ಜೈಲು ಪಾಲಾದ ಹಿನ್ನೆಲೆ ಅದು ಕ್ಯಾನ್ಸಲ್ ಆಗಿತ್ತು. ಇದೀಗ ಅದೇ ಹಾಡು ಆ. 24 ರಂದು ರಿಲೀಸ್ ಆಗುತ್ತಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.