ಗೃಹಲಕ್ಷ್ಮಿ ಯೋಜನೆ: ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಲ್ಲಿ ಅನರ್ಹರನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪತ್ತೆ ಹಚ್ಚಿದ್ದು, ತೆರಿಗೆ ಪಾವತಿ ಮಾಡ್ತಾ ಇದ್ದ 2 ಲಕ್ಷ ಮಂದಿಯನ್ನ ಅನರ್ಹರು ಎಂದು ಪರಿಗಣಿಸಿ ಯೋಜನೆಯಿಂದ ಕೈಬಿಡಲು ಇಲಾಖೆ ಮುಂದಾಗಿದೆ.
ಹೌದು, ಟ್ಯಾಕ್ಸ್ ಪೇಯರ್ ಅಂತಾ ಪರಿಗಣಿಸಿ ಅನರ್ಹರನ್ನ ಪತ್ತೆ ಹಚ್ಚಲಾಗಿದ್ದು, ಸದ್ಯ, 1.28 ಕೋಟಿ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಕೂಡ ಅನರ್ಹರನ್ನ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಆದಾಯ ತೆರಿಗೆ ಮಾಹಿತಿ ಜೊತೆಗೆ ತೆರಿಗೆ ಪಾವತಿ ಮಾಹಿತಿ ಆಧರಿಸಿ ಅನರ್ಹರು ಅಂತಾ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಇನ್ನು, ಮನೆಯ ಯಜಮಾನಿಯರು ಪಡೆಯುವ ₹2000 ಹಣವನ್ನು ಸ್ವ-ಉದ್ಯೋಗದಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ‘ಗೃಹಲಕ್ಷ್ಮೀ ಸಂಘ’ಗಳನ್ನು ರಚಿಸುವ ಪ್ರಸ್ತಾವನೆಯನ್ನು ಇಲಾಖೆ ಸಲ್ಲಿಸಿದ್ದು,ಈ ಸಂಘಗಳಲ್ಲಿ 4 ರಿಂದ 10 ಮಂದಿ ಇರಲಿದ್ದಾರೆ.




