Fasal Bima Yojana : ಯಾವುದೇ ರೀತಿಯ ಪ್ರಾಕೃತಿಕ ವಿಕೋಪದಿಂದ ಬೆಳೆ ಹಾನಿಯಾದರೆ ರೈತರನ್ನು ಆರ್ಥಿಕ ನಷ್ಟದಿಂದ ರಕ್ಷಿಸಲು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಯಾಗಿದೆ.
2025-26 ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯು (Fasal Bima Yojana) ಕರ್ನಾಟಕದಲ್ಲಿ ಓರಿಯೆಂಟಲ್ ಜನರಲ್ ಇನ್‌ಶೂರೆನ್ಸ್ ಕಂಪೆನಿಯ ಸಹಯೋಗದೊಂದಿಗೆ ಜಾರಿಯಾಗುತ್ತಿದೆ. ರೈತರಿಂದ ಈ ಹಂಗಾಮಿನ ಬೆಳೆ ವಿಮಾ (Crop insurance) ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
- ಈರುಳ್ಳಿ, ಹತ್ತಿ: ಜುಲೈ 15, 2025
- ತೊಗರಿ, ನೆಲಗಡಲೆ, ನವಣೆ, ಸಜ್ಜೆ, ಮುಸುಕಿನ ಜೋಳ, ಭತ್ತ, ಜೋಳ, ರಾಗಿ: ಜುಲೈ 31, 2025
- ಭತ್ತ, ಜೋಳ, ರಾಗಿ: ಆಗಸ್ಟ್ 16, 2025
- ಸೂರ್ಯಕಾಂತಿ: ಆಗಸ್ಟ್ 16, 2025
ಬೆಳೆ ವಿಮೆ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
ಆನ್‌ಲೈನ್ (ಸಾಲವಿಲ್ಲದ ರೈತರಿಗೆ)
- pmfby.gov.in ಗೆ ಭೇಟಿ ನೀಡಿ
- Guest Farmer ಆಗಿ ನೋಂದಾಯಿಸಿಕೊಳ್ಳಬೇಕು
- ದಾಖಲೆ ಸಲ್ಲಿಕೆಯ ಬಳಿಕ ಹಣ ಪಾವತಿಸಿ
- ರಸೀದಿ ಡೌನ್‌ಲೋಡ್ ಮಾಡಿಕೊಳ್ಳಬಹುದು
ಬ್ಯಾಂಕ್ ಮೂಲಕ (ಸಾಲ ಪಡೆದ ರೈತರಿಗೆ)
- ಬೆಳೆ ಸಾಲ ಪಡೆದ ಬ್ಯಾಂಕ್‌ಗೆ ಭೇಟಿ ನೀಡಿ
- ಕೇಳಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ
- ಪ್ರೀಮಿಯಂ ಪಾವತಿಸಿ ರಸೀದಿ ಪಡೆಯಬಹುದು
ಸಾಮಾನ್ಯ ಸೇವಾ ಕೇಂದ್ರ (CSC)
- ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ
- ದಾಖಲೆಗಳನ್ನು ಸಲ್ಲಿಸಿ ಅರ್ಜಿ ಭರ್ತಿ ಮಾಡಿ
- ಪ್ರೀಮಿಯಂ ಮೊತ್ತ ಪಾವತಿಸಿ ಮುದ್ರಿತ ರಸೀದಿ ಪಡೆಯಿರಿ
ಬಿಮಾ ಏಜೆಂಟ್‌ಗಳು / ಕಂಪನಿಗಳು
SBI Gen, AIC, HDFC Ergo ಮುಂತಾದ ಭಿಮಾ ಎಜೇಂಟ್ ಗಳ ಮೂಲಕ ದಾಖಲೆ ಸಲ್ಲಿಸಿ, ಪ್ರೀಮಿಯಂ ಪಾವತಿ ಮಾಡಿ, ಪಾಲಿಸಿ ಪಡೆಯಿರಿ.




