ಅಲಹಾಬಾದ್: ಮಗುವಿನ ಪಿತೃತ್ವವನ್ನು ಸಾಬೀತುಪಡಿಸುವ ಏಕೈಕ ಕಾನೂನುಬದ್ಧ ಮತ್ತು ವೈಜ್ಞಾನಿಕ ಮಾರ್ಗವೆಂದರೆ ಡಿಎನ್‌ಎ ಪರೀಕ್ಷೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಹೆಂಡತಿ ತನ್ನ ವಿವಾಹೇತರ ಸಂಬಂಧವನ್ನು ನಿರೂಪಿಸುವುದಕ್ಕೆ, ತನ್ನ ಗಂಡನಿಗೆ ಯಾವುದೇ ತಪ್ಪು ಮಾಡಿಲ್ಲ, ತನಗೆ ಯಾವುದೇ ವಿವಾಹೇತರ ಸಂಬಂಧ ಇಲ್ಲ ಎಂದು ಸಾಬೀತುಪಡಿಸುವುದು ಮತ್ತು ಗಂಡನ ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆಯು ಹೆಂಡತಿಗೆ ಉತ್ತಮವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ನೀಲಂ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ವಿವೇಕ್ ಅಗರ್ವಾಲ್ ಮಂಗಳವಾರ ಆಲಿಸಿದ್ದು, ವಿಚಾರಣೆಯ ಸಮಯದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ.
ಆದರೆ, ಯುವಕರು ಮತ್ತು ಯುವತಿಯರು ತಾವು ಇಷ್ಟಪಡುವವರೊಂದಿಗೆ ಇರಬಹುದೆಂದು ಅಲಹಾಬಾದ್ ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು.
ಅವರ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಯುವಜನರು ತಾವು ಪ್ರೀತಿಸುವವರೊಂದಿಗೆ ಬದುಕಲು ಅವಕಾಶವಿದೆ ಎಂದು ಅದು ಅಲಹಾಬಾದ್ ಕೋರ್ಟ್ ಹೇಳಿದ್ದು, ವಿವಿಧ ಧರ್ಮಗಳ ಯುವಕ ಮತ್ತು ಯುವತಿಯರು ಮದುವೆಯಾದ ಪ್ರಕರಣದಲ್ಲಿ ಸಂಬಂಧಿಸಿದಂತೆ ನ್ಯಾಯಾಲಯವು ಈ ಸಂಚಲನ ತೀರ್ಪು ನೀಡಿತು.
ಇದನ್ನು ಓದಿ: ರಾಜ್ಯದಲ್ಲಿ ನೂತನ ವಿಜಯನಗರ ಜಿಲ್ಲೆಗೆ ಅಸ್ತು ಎಂದ ಸಚಿವ ಸಂಪುಟ!