ನಾಳೆ ಹಾಸನಾಂಬ ದೇಗುಲ ಬಾಗಿಲು ಮುಚ್ಚಲು ನಿರ್ಧಾರ; ಭಕ್ತರಿಂದ ತೀವ್ರ ವಿರೋಧ

ಹಾಸನ: ನಾಳೆ ಹಾಸನಾಂಬ ದೇಗುಲ ಬಾಗಿಲು ಮುಚ್ಚಲು ನಿರ್ಧಾರ ಹಿನ್ನಲೆ ಸಂಬಂಧಿಸಿದಂತೆ ಹಾಸನ ಜಿಲ್ಲಾಡಳಿತ ನಿರ್ಧಾರಕ್ಕೆ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹಾಸನ ಜಿಲ್ಲಾಡಳಿತ ಸಂಪ್ರದಾಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಭಕ್ತರು ಆರೋಪಿಸಿದ್ದು, ಬಲಿಪಾಡ್ಯಮಿ…

hasanamba temple vijayaprabha news

ಹಾಸನ: ನಾಳೆ ಹಾಸನಾಂಬ ದೇಗುಲ ಬಾಗಿಲು ಮುಚ್ಚಲು ನಿರ್ಧಾರ ಹಿನ್ನಲೆ ಸಂಬಂಧಿಸಿದಂತೆ ಹಾಸನ ಜಿಲ್ಲಾಡಳಿತ ನಿರ್ಧಾರಕ್ಕೆ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಹಾಸನ ಜಿಲ್ಲಾಡಳಿತ ಸಂಪ್ರದಾಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಭಕ್ತರು ಆರೋಪಿಸಿದ್ದು, ಬಲಿಪಾಡ್ಯಮಿ ಮರುದಿನ ಹಾಸನಾಂಬ ದೇಗುಲ ಬಾಗಿಲು ಮುಚ್ಚುತ್ತಿದ್ದರು
ಆದ್ರೆ ಈ ಬಾರಿ ಒಂದು ದಿನ ಮುಂಚಿತವಾಗಿ ಮುಚ್ಚಲಾಗುತ್ತಿದೆ.ಇದರಿಂದ ಶತಮಾನಗಳಿಂದ ಬಂದ ಸಂಪ್ರದಾಯವನ್ನು ಹಾಸನ ಜಿಲ್ಲಾಡಳಿತ ಮುರಿಯುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತವು ಹಾಸನಾಂಬ ದೇಗುಲ ದರ್ಶನಕ್ಕೆ ಬರುವ ಭಕ್ತರು ಹೆಚ್ಚಾಗುವ ಸಾಧ್ಯತೆಯಿದ್ದು, ಗುಂಪಾಗಿ ಸೇರುವ ಸಾಧ್ಯತೆ ಇರುವುದರಿಂದ ಕರೋನ ಸೋಂಕು ಹರಡುವ ಸಾಧ್ಯತೆಯಿದ್ದು, ಒಂದು ದಿನ ಮುಂಚಿತವಾಗಿ ದೇಗುಲದ ಬಾಗಿಲು ಮುಚ್ಚಬೇಕು ಎಂದು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ ಸಂಪ್ರದಾಯಬದ್ಧವಾಗಿ ಮಂಗಳವಾರ ಹಾಸನಾಂಬ ದೇಗುಲದ ಬಾಗಿಲು ಮುಚ್ಚಬೇಕು ಎಂದು ಹಾಸನ ಜಿಲ್ಲಾಡಳಿತವನ್ನು ಭಕ್ತರು ಒತ್ತಾಯಿಸಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.