ನಿಜವಾಯ್ತಾ ದೇವರಗುಡ್ಡದ ಗೊರವಜ್ಜ ನುಡಿದ ಈ ವರ್ಷದ ಭವಿಷ್ಯವಾಣಿ?

ಹಾವೇರಿ: ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಪ್ರತಿವರ್ಷ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ನೆರವೇರಿಸಲಾಗುತ್ತಿದೆ. ಇಂತಹ ಕಾರ್ಣಿಕದಲ್ಲಿ ನುಡಿದಂತಹ ಗೊರವಪ್ಪನ ನುಡಿ ವರ್ಷದ ಭವಿಷ್ಯವಾಣಿಯಾಗಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದ್ದು, ಸಾಕ್ಷಾತ್ ಮೈಲಾರಲಿಂಗೇಶ್ವರನೇ ನುಡಿದ…

mylaralingeshwara vijayaprabha

ಹಾವೇರಿ: ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಪ್ರತಿವರ್ಷ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ನೆರವೇರಿಸಲಾಗುತ್ತಿದೆ. ಇಂತಹ ಕಾರ್ಣಿಕದಲ್ಲಿ ನುಡಿದಂತಹ ಗೊರವಪ್ಪನ ನುಡಿ ವರ್ಷದ ಭವಿಷ್ಯವಾಣಿಯಾಗಿರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದ್ದು, ಸಾಕ್ಷಾತ್ ಮೈಲಾರಲಿಂಗೇಶ್ವರನೇ ನುಡಿದ ನುಡಿ ಎನ್ನಲಾಗುತ್ತದೆ.

ಈ ವರ್ಷ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ನಡೆದ ಕಾರ್ಣಿಕದಲ್ಲಿ “ವ್ಯಾದಿ ಬೂದಿಯಾತಲೆ, ಸೃಷ್ಟಿ ಸಿರಿಯಾತಲೆ ಪರಾಕ್” ಅಂತಾ ಬಿಲ್ಲನೇರಿ ಗೊರವಯ್ಯ ನಾಗಪ್ಪಜ್ಜ ವರ್ಷದ ಕಾರ್ಣಿಕ ನುಡಿದಿದ್ದ. ಅಂದರೆ ಕರೋನ ವ್ಯಾದಿ ದೂರವಾಗಿ ಸೃಷ್ಟಿಯಲ್ಲಿ ಸಿರಿ ಆಗಲಿದೆ ಎನ್ನಲಾಗಿತ್ತು.

ಈಗ ದೇಶದಲ್ಲಿ ಕೊರೋನಾ ಅಟ್ಟಹಾಸ ಕಡಿಮೆಯಾಗಿದ್ದು, ಗೊರವಯ್ಯ ನಾಗಪ್ಪಜ್ಜ ನುಡಿದ ವರ್ಷದ ಕಾರ್ಣಿಕ ಸತ್ಯವಾಗಿದೆ ಎನ್ನಲಾಗಿದ್ದು, ಮೈಲಾರಲಿಂಗೇಶ್ವರ ದೇವರ ಮೇಲೆ ಭಕ್ತರ ಭಕ್ತಿ ಹೆಚ್ಚಾಗಿದೆ.

Vijayaprabha Mobile App free

ಕಳೆದ ವರ್ಷ ಕಾರ್ಣಿಕೋತ್ಸವದಲ್ಲಿ ಗೊರವಯ್ಯ “ಘಟಸರ್ಪ ಕಂಗಾಲಾದಿತಲೆ ಪರಾಕ್ “ ಎಂದು ಭವಿಷ್ಯವಾಣಿ ನುಡಿದಿದ್ದ. ಇದರಂತೆ ದೇಶದಲ್ಲಿ ಕರೋನ ಸೋಂಕು ಹೆಚ್ಚಾಗಿ ಲಕ್ಷಾಂತರ ಜನರು ಸಾವನ್ನಪ್ಪಿದ್ದು, ಬಾರಿ ಮಳೆಯಿಂದ ರೈತರು ಬೆಳೆದ ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗುವಂತೆ ಆಗಿದ್ದು, ಇದಕ್ಕೆ ಸಾಕ್ಷಿ ಎನ್ನಲಾಗಿದೆ.

ಇದನ್ನು ಓದಿ: ದೇವರಗುಡ್ಡದ ವರ್ಷದ ಕಾರ್ಣಿಕ: ವ್ಯಾದಿ ಬೂದಿ ಆದಿತಲೆ,ಸೃಷ್ಟಿ ಸಿರಿ ಆಯಿತಲೆ ಪರಾಕ್..!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.