ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ ಅಪ್ಪು ಸಿನಿಮಾ ಇಂದು ಪಿ ಆರ್ ಕೆ ಬ್ಯಾನರ್ ಅಡಿಯಲ್ಲಿ ಕರ್ನಾಟಕದಾದ್ಯಂತ ಅದ್ದೂರಿಯಾಗಿ ಮರು ಬಿಡುಗಡೆಯಾಗಿದೆ.
ಕರ್ನಾಟಕದ ಎಲ್ಲಡೇ ಸುಮಾರು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲಡೇ ಅಪ್ಪು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಅಪ್ಪು ಕಟೌಟ್ ಗೆ ಹಾಲಿನ ಅಭಿಷೇಕ ಹೂವಿನ ಹಾರವನ್ನು ಹಾಕುವ ಮೂಲಕ ತಮ್ಮ ನೆಚ್ಚಿನ ಪರಮಾತ್ಮನನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ.
23 ವರ್ಷಗಳ ನಂತರ ಮರು ಬಿಡುಗಡೆಯಾಗಿದ್ದು ಪೂರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ, ಪ್ರಪ್ರಥಮ ಬಾರಿಗೆ ಪುನೀತ್ ರಾಜ್ಕುಮಾರ್ ನಾಯಕನಾಗಿ ಹಾಗೂ ರಕ್ಷಿತಾ ನಾಯಕಿಯಾಗಿ ಬಣ್ಣ ಹಚ್ಚಿ ತೆರೆ ಮೇಲೆ ಸೈ ಎನಿಸಿಕೊಂಡಿದ್ದರು.
ಇನ್ನೂ ಹಲವೆಡೆ ಬೆಳಗಿನ ಜಾವ 6 ಗಂಟೆಗೆ ಪ್ರದರ್ಶನ ಶುರುವಾಗಿದ್ದು ಅಭಿಮಾನಿಗಳು ತಮ್ಮ ನೆಚ್ಚಿನ ಪವರ್ ಸ್ಟಾರ್ ನನ್ನು ನೋಡಿ ಕಣ್ತುಂಬಿಕೊಂಡು ಭಾವುಕರಾಗಿದ್ದಾರೆ.