1. ಮುಟ್ಟಿನ ಅವಧಿಯಲ್ಲಿ ದಿನಕ್ಕೆ ಮೂರು ಬಾರಿ ನಿಂಬೆ ರಸವನ್ನು ಸೇವಿಸಿದರೆ ಹೆಚ್ಚಿನ ಋತುಸ್ರಾವವಾಗುವುದಿಲ್ಲ.
2. ಗರ್ಭಿಣಿಯರು ಬಾಳೆ ಹಣ್ಣನ್ನು ಕ್ರಮವಾಗಿ ತಿನ್ನುವುದರಿಂದ ರಕ್ತ ಮುಷ್ಟಿಯಾಗಿ ಸುಖ ಹೆರಿಗೆಗೆ ದಾರಿಯಾಗುತ್ತದೆ.
3. ಎಳೆ ನೀರು ಮತ್ತು ಬಾರಿಯ ನೀರನ್ನು ಸಾಕಷ್ಟು ಕುಡಿಯುವುದರಿಂದ ಗರ್ಭಿಣಿ ಸ್ತ್ರೀಯರಲ್ಲಿ ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯುತ್ತಿದ್ದರೆ ನಿಂತು ಹೋಗುವುದು.
4. ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಬೆನ್ನಿಗೆ ಚೆನ್ನಾಗಿ ತಿಕ್ಕಿ ಬಿಸಿ ನೀರು ಸ್ನಾನ ಮಾಡಿದರೆ ಗರ್ಭಿಣಿಯರ ಬೆನ್ನು ನೋವು ಮಾಯವಾಗುವುದು.
5. ಕಿತ್ತಳೆ ಹಣ್ಣಿನ ರಸವನ್ನು ಗರ್ಭಿಣಿಯರಿಗೆ ಕುಡಿಸುತ್ತಿದ್ದರೆ ಹೆರಿಗೆ ಸುಲಭವಾಗಿ ಆಗುತ್ತದೆ.
6. ಮುಟ್ಟಿನ ಕಾಲದಲ್ಲಿ ಅಧಿಕ ಸ್ರಾವವಾಗುತ್ತಿದ್ದರೆ ದಂಟಿನ ಸೊಪ್ಪನ್ನು ಹೆಚ್ಚು ಬಳಸುವುದರಿಂದ ಗುಣವಾಗುತ್ತದೆ.
7. ಹಾಲು ತುಂಬಿದ ರಾಗಿ ತೆನೆಗಳನ್ನು ಸುಟ್ಟು, ಉಜ್ಜಿ ಕಾಳುಗಳನ್ನು ಉದುರಿಸಿ ಬೆಲ್ಲ ಕೊಬ್ಬರಿ ಹಾಕಿಕೊಂಡು ತಿಂದರೆ ಬಾಣಂತಿಯರ ಎದೆಹಾಲಿನ ಉತ್ಪತ್ತಿ ಹೆಚ್ಚುವುದು.
8, ಕರಿ ಎಳ್ಳಿನ ಪುಡಿಯನ್ನು ಬಿಸಿ ನೀರಿನೊಂದಿಗೆ ಸೇವಿಸಿದರೆ ಅವಿವಾಹಿತ ತರುಣಿಯರ ಮುಟ್ಟಿನ ನೋವು ಶಮನವಾಗುತ್ತದೆ.
9. ಹೆರಿಗೆ ನಂತರ ಸಬ್ಬಸಿಗೆ ಸೊಪ್ಪನ್ನು ದಿನನಿತ್ಯ ಸೇವಿಸುತ್ತಿದ್ದರೆ ಎದೆ ಹಾಲಿನ ಉತ್ಪತ್ತಿ ಹೆಚ್ಚಾಗುವುದು.
10. ಹಾಲು, ಜೇನುತುಪ್ಪ ಮತ್ತು ಪರಂಗಿ ಹಣ್ಣನ್ನು ಕೂಡಿಸಿ ತಿಂದರೆ ನರಗಳ ದುರ್ಬಲತೆ ಹೋಗುವುದು. ಗರ್ಭಿಣಿಯರಿಗೆ ಇದು ಶಕ್ತಿದಾಯಕವಾದ ಆಹಾರವಾಗುವುದು.
11. ಹೆರಿಗೆಯ ನಂತರ ದಿನಗಳಲ್ಲಿ ಬಾಣಂತಿಗೆ ಹುರುಳಿ ಕಟ್ಟಿನ ಸಾರು ಕೊಡುವುದರಿಂದ ಗರ್ಭಾಶಯದ ನೋವು ಶಮನವಾಗುವುದು.
12. ಮುಟ್ಟಿನ ದೋಷದಿಂದ ಗರ್ಭಾಶಯದಲ್ಲಿ ನೋವು ಕಾಣಿಸಿ ಕೊಂಡರೆ ಬೆಳ್ಳುಳ್ಳಿಯನ್ನು ಒಂದು ಬಟ್ಟಲು ನೀರಿನಲ್ಲಿ ಚೆನ್ನಾಗಿ ಬೇಯಿಸಿ, ಈ ನೀರನ್ನು ದಿನಕ್ಕೆ ಮೂರಾವರ್ತಿಯಂತೆ ಕುಡಿಯು ವುದರಿಂದ ನೋವು ಶಮನವಾಗುವುದು.
ಇದನ್ನು ಓದಿ: ನೆಗಡಿ, ಕೆಮ್ಮು, ದಮ್ಮು, ಗಂಟಲು ನೋವುಗಳಿಗೆ ಮನೆ ಔಷಧಿ