ಉರಿ ಮೂತ್ರಕ್ಕೆ ಸುಲಭ ಚಿಕಿತ್ಸೆ
1. ಹೆಚ್ಚು ನೀರು ಸೇವಿಸುವುದರಿಂದ ಉರಿ ಮೂತ್ರ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವುದು. ದಿನದಲ್ಲಿ ಏಳೆಂಟು ಬಟ್ಟಲುಗಳಷ್ಟಾದರೂ ನೀರು ಸೇವಿಸಬೇಕು. ಒಂದು ಬಟ್ಟಲು ನೀರಿಗೆ ಅರ್ಧ ಹೋಳು ನಿಂಬೆ ಹಣ್ಣಿನ ರಸ ಹಿಂಡಿ ಒಂದು ಚಿಟಿಕೆ ಉಪ್ಪಿನ ಪುಡಿ ಬೆರೆಸಿ ಸೇವಿಸುವುದರಿಂದ ಹೆಚ್ಚು ಪ್ರಯೋಜನವುಂಟು.
2. ಒಂದು ಬಟ್ಟಲು ಎಳೆ ನೀರಿಗೆ ಸ್ವಲ್ಪ ಬೆಲ್ಲ ಮತ್ತು ಅರ್ಧ ಟೀ ಚಮಚ ಕೊತ್ತಂಬರಿ ಬೀಜದ ಚೂರ್ಣ ಸೇರಿಸಿ ದಿನಕ್ಕೆ ಎರಡಾವರ್ತಿ ಸೇವಿಸುವುದರಿಂದ ಉರಿ ಮೂತ್ರ ನಿವಾರಣೆಯಾಗುವುದು.
3. ಕಲ್ಲಂಗಡಿ ಹಣ್ಣಿನ ರಸ ಮತ್ತು ಮಜ್ಜಿಗೆ ಸಮಪ್ರಮಾಣದಲ್ಲಿ ಮಿಶ್ರ ಮಾಡಿ ಒಂದು ಚಿಟಕಿ ಉಪ್ಪು ಸೇರಿಸಿ ಸೇವಿಸುವುದರಿಂದ ಗುಣವುಂಟು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.