ಬೆಂಗಳೂರು: ಸರ್ದಾರ್ ವಲ್ಲಬಾಯ್ ಪಟೇಲ್ ರವರ 145 ನೇ ಜಯಂತಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಪುಣ್ಯಸ್ಮರಣೆಯಂದು ಬೆಂಗಳೂರಿನ ಕೆಪಿಸಿಸಿ ಕಚೇರಿ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಹಾಗು ಬಿಜೆಪಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇಶಕ್ಕಾಗಿ ಬಿಜೆಪಿಯವರು ಒಬ್ಬರೂ ಪ್ರಾಣತ್ಯಾಗ ಮಾಡಿಲ್ಲ. ದೇಶದ ಏಕತೆಗಾಗಿ ಇಂದಿರಾಗಾಂಧಿ ಪ್ರಾಣತ್ಯಾಗ ಮಾಡಿದ್ದಾರೆ.ಆದ್ರೂ ನಾವು ದೇಶಭಕ್ತರೆಂದು ಬಿಜೆಪಿಯವರು ಹೇಳುತ್ತಾರೆ. ಇವರು ಮಹಾತ್ಮಾ ಗಾಂಧೀಜಿ ಅವರನ್ನು ಕೊಂದ ವಂಶಸ್ಥರು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇವರೆಲ್ಲಾ ದೇಶ ಭಕ್ತರು ಅಂತ ಈಗ ಹೇಳಿಕೊಳ್ಳುತ್ತಿದ್ದಾರೆ,ಮಹಾನ್ ದೇಶಭಕ್ತರು ಎಂದು ಹೇಳಿಕೊಂಡು ತಿರುಗುತ್ತಿದ್ದರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಲ್ಲಬಾಯ್ ಪಟೇಲರಿಗೂ ಬಿಜೆಪಿಗೂ ಏನು ಸಂಬಂಧ ? ಗಾಂಧೀಜಿಯವರನ್ನು ಕೊಂದಿದ್ದ ಗೋಡ್ಸೆ ಆರ್ ಎಸ್ ಎಸ್ ನವರು. ಆಗ ಆರ್.ಎಸ್.ಎಸ್ ರದ್ದು ಮಾಡಿದ್ದೇ ಸರ್ದಾರ್ ಪಟೇಲ್. ಈಗ ಇವರು ವಲ್ಲಭಬಾಯ್ ಪಟೇಲ್ ಹೆಸರು ಹೇಳಿ ದೇಶಭಕ್ತರಾಗಲು ಹೊರಟಿದ್ದಾರೆ. ಇತಿಹಾಸ ತಿರುಚುವುದರಲ್ಲಿ ಬಿಜೆಪಿಯವರು ನಿಸ್ಸಿಮರು. ಸರ್ದಾರ್ ಪಟೇಲರ ಪ್ರತಿಮೆಗೆ ನಮ್ಮ ವಿರೋಧ ಇಲ್ಲ. ಆದ್ರೆ ನೆಹರು, ಪಟೇಲ್ ಸಂಬಂಧದ ಬಗ್ಗೆ ತಿರುಚುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.