ಶಾಕಿಂಗ್ ಘಟನೆ: ಶಿಶುವಿನ ಅರ್ಧ ದೇಹ ತಿಂದ ನಾಯಿ

ಕೋಟೆನಾಡು ಚಿತ್ರದುರ್ಗದಲ್ಲಿ ಶಾಕಿಂಗ್ ಹಾಗೂ ಮನಕರಗುವ ಘಟನೆಯೊಂದು ನಡೆದಿದೆ. ನವಜಾತ ಶಿಶು ನಾಯಿಗಳ ಆಹಾರವಾಗ ಘಟನೆಗೆ ಚಿತ್ರದುರ್ಗ ಸಾಕ್ಷಿಯಾಗಿದೆ. ಹೌದು, ಚಿತ್ರದುರ್ಗ  ನಗರದ ಚಳ್ಳಕೆರೆ ಗೇಟ್ ಸಮೀಪದ ದೇವರಾಜ್ ಅರಸು ಶಿಕ್ಷಣ ಸಂಸ್ಥೆ ಆವರಣದಲ್ಲಿ…

ಕೋಟೆನಾಡು ಚಿತ್ರದುರ್ಗದಲ್ಲಿ ಶಾಕಿಂಗ್ ಹಾಗೂ ಮನಕರಗುವ ಘಟನೆಯೊಂದು ನಡೆದಿದೆ. ನವಜಾತ ಶಿಶು ನಾಯಿಗಳ ಆಹಾರವಾಗ ಘಟನೆಗೆ ಚಿತ್ರದುರ್ಗ ಸಾಕ್ಷಿಯಾಗಿದೆ.

ಹೌದು, ಚಿತ್ರದುರ್ಗ  ನಗರದ ಚಳ್ಳಕೆರೆ ಗೇಟ್ ಸಮೀಪದ ದೇವರಾಜ್ ಅರಸು ಶಿಕ್ಷಣ ಸಂಸ್ಥೆ ಆವರಣದಲ್ಲಿ ನಾಯಿ ಕಚ್ಚಿ ಎಳೆದಾಡಿರುವ ಶಿಶುವಿನ ಅರ್ಧ ದೇಹ ಕಂಡು ಬಂದಿದೆ.

ಮಗುವಿನ ಅರ್ಧ ದೇಹ ಹಾಗೂ ಬಲಗೈಯನ್ನು ಕಚ್ಚಿ ತಿಂದಿವೆ. ಇದನ್ನು ಗಮನಿಸಿದ ಸೆಕ್ಯೂರಿಟಿ ಬೆದರಿಸಿದ ಕೂಡಲೇ ನಾಯಿ ಕಚ್ಚಿದ ಶಿಶುವಿನ ದೇಹ ಬಿಟ್ಟು ಹೋಗಿದೆ.

Vijayaprabha Mobile App free

ಸ್ಥಳಕ್ಕೆ ಡಿವೈಎಸ್ಪಿ ದಿನಕರ್, ಬಡಾವಣೆ ಠಾಣೆಯ ಸಿಪಿಐ ನಯೀಂ ಅಹ್ಮದ್, ಪಿಎಸ್‌ಐ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪೊಲೀಸರ ಶ್ವಾನದಳದಿಂದಲೂ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅಪರಿಚಿತ ವ್ಯಕ್ತಿಗಳು ನವಜಾತ ಶಿಶುವವನ್ನು ಎಸೆದಿರಬಹುದು ಎಂದು ಶಂಕಿಸಲಾಗಿದೆ. ಮಹಿಳಾ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.