ಚೆನ್ನೈ: ತಿರುಪೋರೂರಿನ ಅರುಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ ಕಾಣಿಕೆ ಹಾಕುತ್ತಿದ್ದಾಗ ದಿನೇಶ್ ಎಂಬುವರ ಐಫೋನ್ ಅಂಗಿ ಜೇಬಿನಿಂದ ಹುಂಡಿಗೆ ಬಿದ್ದಿದೆ.
ಆಕಸ್ಮಿಕವಾಗಿ ದೇವಸ್ಥಾನದ ಹುಂಡಿಗೆ ಬಿದ್ದ ಐಫೋನ್ ಅನ್ನು ಹಿಂದಿರುಗಿಸುವಂತೆ ಮನವಿ ಮಾಡಿದಾಗ, ‘ಈಗ ಇದು ದೇವಸ್ಥಾನದ ಆಸ್ತಿ’ ಎಂದು ದೇವಾಲಯದ ಆಡಳಿತ ಮಂಡಳಿ ಉತ್ತರಿಸಿದೆ.
ಫೋನ್ ಮರಳಿ ಕೊಡುವಂತೆ ದಿನೇಶ್ ಪಟ್ಟು ಹಿಡಿದಾಗ, ‘ಹುಂಡಿಗೆ ಬಿದ್ದ ವಸ್ತುವೆಲ್ಲವೂ ದೇವರಿಗೆ ಸೇರಿದ್ದು’ ಎಂದು ಅಧಿಕಾರಿಗಳು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಫೋನ್ನಲ್ಲಿದ್ದ ಡೇಟಾ ಹಾಗೂ ಸಿಮ್ ಮಾತ್ರ ಹಿಂತಿರುಗಿಸಿದ್ದಾರೆ.
ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಕೆ. ಸೇಕರ್ ಬಾಬು ಅವರ ಗಮನಕ್ಕೆ ಬರುತ್ತಿದ್ದಂತೆ ಪ್ರತಿಕ್ರಿಯಿಸಿ, ‘ಯಾವುದೇ ಕಾಣಿಕೆ/ವಸ್ತು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ದೇವಸ್ಥಾನದ ಹುಂಡಿಗೆ ಬಿದ್ದರೆ ಅದು ದೇವಾಲಯದ ಭಾಗವಾಗುತ್ತದೆ ಎಂದು ಸ್ಪಷ್ಟಪಡಿಸಿದರು.