Rashi bhavishya | ಶನಿ-ಮಂಗಳ ಷಡಷ್ಟಕ ಯೋಗ, ಈ 3 ರಾಶಿಯವರಿಗೆ ಶುಭ

Rashi bhavishya | ನ್ಯಾಯಾಧಾತ ಆಗಿರುವಂತ ಶನಿಯು ತನ್ನ ಮೂಲ ತ್ರಿಕೋನ ರಾಶಿ ಆಗಿರುವ೦ತಹ ಕುಂಭ ರಾಶಿಯಲ್ಲಿರುವ ಮಂಗಳನ ಜೊತೆ ಸೇರಿ ಷಡಷ್ಟಕ ಯೋಗವನ್ನು ನಿರ್ಮಾಣ ಮಾಡಿದ್ದು, ವೈದಿಕ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ…

rashi bhavishya

Rashi bhavishya | ನ್ಯಾಯಾಧಾತ ಆಗಿರುವಂತ ಶನಿಯು ತನ್ನ ಮೂಲ ತ್ರಿಕೋನ ರಾಶಿ ಆಗಿರುವ೦ತಹ ಕುಂಭ ರಾಶಿಯಲ್ಲಿರುವ ಮಂಗಳನ ಜೊತೆ ಸೇರಿ ಷಡಷ್ಟಕ ಯೋಗವನ್ನು ನಿರ್ಮಾಣ ಮಾಡಿದ್ದು, ವೈದಿಕ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಇದು ಅತ್ಯಂತ ಅಶುಭ ಯೋಗ ಎಂಬುದಾಗಿ ಪರಿಗಣಿಸಲಾಗುತ್ತದೆ. ಕೆಲವು ರಾಶಿಯವರಿಗೆ ಷಡಷ್ಟಕ ಯೋಗ ಸಾಕಷ್ಟು ಉತ್ತಮ ಅವಕಾಶಗಳನ್ನು ನೀಡಲಿದ್ದು ತಮ್ಮ ಜೀವನದಲ್ಲಿ ಈ ಸ೦ದರ್ಭದಲ್ಲಿ ಅವರು ಸಾಕಷ್ಟು ಗೆಲುವಿನ ಕ್ಷಣಗಳನ್ನು ಆನಂದಿಸಲಿದ್ದಾರೆ.

ಮೇಷ ರಾಶಿ ಭವಿಷ್ಯ (Mesha rashi bhavishya)

Dina bhavishya mesha rashi
Dina bhavishya mesha rashi

ಈ ರಾಶಿಯವರಿಗೆ ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಅಧಿಕಾರಿಗಳಿ೦ದ ನಿಮಗೆ ಸಿಗುವಂತಹ ಮಾರ್ಗದರ್ಶನ ಹಾಗೂ ಬೆ೦ಬಲದಿ೦ದಾಗಿ ಸಾಕಷ್ಟು ಲಾಭ ಸಿಗಲಿದೆ. ಜೀವನದಲ್ಲಿ ಸಂತೋಷಮಯ ಕ್ಷಣಗಳ ಆಗಮನವಾಗಲಿದೆ. ದಾಂಪತ್ಯ ಜೀವನದಲ್ಲಿ ಕೂಡ ಸಂತೋಷದ ಆಗಮನವಾಗಲಿದೆ.

ಇದನ್ನೂ ಓದಿ: Rashi bhavishya | ಈ ರಾಶಿಯ ದಂಪತಿಗಳಿಗೆ ಒಟ್ಟುಗೂಡಿಸುವುದೇ ಒಂದು ಪುಣ್ಯದ ಕೆಲಸ!

Vijayaprabha Mobile App free

ತುಲಾ ರಾಶಿ ಭವಿಷ್ಯ (Tula rashi bhavishya)

Dina bhavishya tula rashi
Dina bhavishya tula rashi

ಮಂಗಳ ಹಾಗೂ ಶನಿಯ ಈ ವಿಶೇಷವಾದ ಯೋಗದಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಕುಟುಂಬದಲ್ಲಿ ಸುಖ ಹಾಗೂ ಶಾಂತಿ ಮತ್ತು ನೆಮ್ಮದಿ ನೆಲೆಸಲಿದೆ. ಮಾಡುವಂತ ಕೆಲಸದಲ್ಲಿ ಅದೃಷ್ಟದ ಸಂಪೂರ್ಣ ಸಹಕಾರ ದೊರಕಲಿದೆ. ಹೀಗಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ನೀವು ಗೆಲುವನ್ನು ಸಾಧಿಸಬಹುದಾಗಿದೆ.

ಇದನ್ನೂ ಓದಿ: Janma Kundali | ಜನ್ಮ ಕುಂಡಲಿಯಲ್ಲಿ ಯಾವ ಮನೆಯಲ್ಲಿ ಶನಿ ಸ್ವಾಮಿ ಇದ್ದರೆ ವಿವಾಹ ವಿಳಂಬಕ್ಕೆ ಕಾರಣ ವಾಗುತ್ತದೆ?

ಕುಂಭ ರಾಶಿ ಭವಿಷ್ಯ (Kumba rashi bhavishya)

Dina bhavishya kumbha rashi
Dina bhavishya kumbha rashi

ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವಂತಹ ಕುಂಭ ರಾಶಿಯವರ ಕೆಲಸಗಳು ಕೂಡ ಈ ಸಂದರ್ಭದಲ್ಲಿ ಮರು ಪ್ರಾರಂಭವಾಗಲಿವೆ. ಜೀವನದಲ್ಲಿ ಸುಖ ಹಾಗೂ ಶಾಂತಿಯ ನೆಲೆಯೂರಿ, ಹೆಚ್ಚಿನ ಲಾಭವಾಗಲಿದೆ. ಈ ಸಮಯದಲ್ಲಿ ನೀವು ನಿಮ್ಮ ವ್ಯಾಪಾರ ಅಥವಾ ವ್ಯವಹಾರಗಳಲ್ಲಿ ತೆಗೆದುಕೊಳ್ಳುವಂತಹ ದೊಡ್ಡ ನಿರ್ಧಾರ ಎನ್ನುವುದು ಸಕಾರಾತ್ಮಕವಾಗಿ ಕಾರ್ಯರೂಪಕ್ಕೆ ಜಾರಿಯಾಗಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply