ಹಾವೇರಿ : ಜಿಲ್ಲೆಯ ದೇವರಗುಡ್ಡದ ಗೋರವಪ್ಪ ನುಡಿದ ವರ್ಷದ ಭವಿಷ್ಯ ವಾಣಿಯನ್ನು ಸಾಕ್ಷಾತ್ ಮೈಲಾರ ಲಿಂಗೇಶ್ವರನೇ ನುಡಿದ್ದಾನೆ ಎಂಬುದು ಭಕ್ತರ ನಂಬಿಕೆ. ಇಂತಹ ಗೊರವಪ್ಪ “ವ್ಯಾದಿ ಬೂದಿ ಅಧಿತಲೇ, ಸೃಷ್ಟಿ ಸಿರಿ ಆಯಿತಲೆ ಪರಾಕ್” ಎಂದು ತನ್ನ ಕಾರ್ಣಿಕ ನುಡಿಯನ್ನು ನುಡಿದಿದ್ದಾನೆ.
ಪ್ರತಿವರ್ಷವೂ ಕೂಡ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಗೊರವಪ್ಪನ ಕಾರ್ಣಿಕ ನೆರವೇರಿಸಲಾಗುತ್ತದೆ. ಪ್ರತಿವರ್ಷ ಕಾರ್ಣಿಕದಲ್ಲಿ ನುಡಿಯುವಂತ ಗೊರವಪ್ಪ ನುಡಿಯುವ ಕಾರ್ಣಿಕ ನುಡಿಯನ್ನು ವರ್ಷದ ಭವಿಷ್ಯವಾಣಿಯೇ ಎಂದು ಹಿಂದಿನಿಂದಲು ನಂಬಿಕೊಂಡು ಭಕ್ತರು ಬಂದಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ದೇವರಗುಡ್ಡದಲ್ಲಿ ಕಾರ್ಣಿಕ ನಡೆಯಿತು.
ಈ ವರ್ಷದ ಭವಿಷ್ಯ ವಾಣಿಯನ್ನು ಗೊರವಪ್ಪ ನುಡಿದಿದ್ದು, ಕರೋನ ದೂರವಾಗಿ ಸೃಷ್ಟಿಯಲ್ಲಿ ಸಿರಿ ಆಗಲಿದೆ, ಇನ್ನು ರಾಜ್ಯದ ರಾಜಕೀಯ ಡೋಲಾಯಮಾನ ಸ್ಥಿತಿ ಸುಧಾರಣೆಯಾಗಲಿದೆ ಎಂದು ಗೊರವಪ್ಪ ಕಾರ್ಣಿಕ ನುಡಿದಿದ್ದಾರೆ ಎನ್ನಲಾಗಿದೆ.
ಕಾರ್ಣಿಕ ಕಟ್ಟೆಯಲ್ಲಿ ಬಿಲ್ಲನೇರಿ ನಾಗಪ್ಪಜ್ಜ ಗೊರವಯ್ಯ ವರ್ಷದ ಭವಿಷ್ಯದ ಕಾರ್ಣಿಕ ನುಡಿಯನ್ನು ನುಡಿದಿದ್ದಾರೆ. ಈ ಕಾರ್ಣಿಕ ನುಡಿಯನ್ನು ಮೈಲಾರ ಲಿಂಗೇಶ್ವರನೇ ನುಡಿದ ನುಡಿ ಎಂದು ಹಿಂದಿನಿಂದಲೂ ಭಕ್ತರು ನಂಬಿದ್ದಾರೆ.