ಕನ್ನಡಿಗರಿಗೆ ಟೆಸ್ಕೋ ಬಂಪರ್ ಆಫರ್: 16500 ಉದ್ಯೋಗ ಸೃಷ್ಟಿಗೆ ಮುಂದು

ಕನ್ನಡಿಗರಿಗೆ ಟೆಸ್ಕೋ ಬಂಪರ್ (Jobs in Tesco) ಆಫರ್, ರಾಜ್ಯದಲ್ಲಿ 16500 ಉದ್ಯೋಗ ಸೃಷ್ಟಿಗೆ ಮುಂದಾದ ಕಂಪನಿ, ಹೊಸಕೋಟೆಯಲ್ಲಿ ಹೊಸ ವಿತರಣಾ ಕೇಂದ್ರ ಸ್ಥಾಪನೆಗೆ ಸಜ್ಜು, ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಲು ಜಾಗತಿಕ ಕಂಪನಿಗಳು ಆಕರ್ಷಿಸುತ್ತಿದೆ…

jobs in tesco

ಕನ್ನಡಿಗರಿಗೆ ಟೆಸ್ಕೋ ಬಂಪರ್ (Jobs in Tesco) ಆಫರ್, ರಾಜ್ಯದಲ್ಲಿ 16500 ಉದ್ಯೋಗ ಸೃಷ್ಟಿಗೆ ಮುಂದಾದ ಕಂಪನಿ, ಹೊಸಕೋಟೆಯಲ್ಲಿ ಹೊಸ ವಿತರಣಾ ಕೇಂದ್ರ ಸ್ಥಾಪನೆಗೆ ಸಜ್ಜು, ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಲು ಜಾಗತಿಕ ಕಂಪನಿಗಳು ಆಕರ್ಷಿಸುತ್ತಿದೆ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರೆಂಟಿಗಳ ಭಾಗವಾಗಿ ಯುವನಿಧಿ ಘೋಷಿಸಿದ ಬೆನ್ನಲ್ಲೇ ಈಗ ಯುವ ಸಮುದಾಯಕ್ಕೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.

ರಾಜ್ಯದಲ್ಲಿ ಯುವ ಸಮುದಾಯಕ್ಕೆ ಅಗತ್ಯ, ಅರ್ಹ ಉದ್ಯೋಗ ದೊರಕಿಸಿಕೊಡಲೆಂದು ಹತ್ತು ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳನ್ನು ಆಹ್ವಾನಿಸುತ್ತಿದೆ.

Vijayaprabha Mobile App free

ಅದರಂತೆ ಈಗ ಕೈಗಾರಿಕಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಟೆಸ್ಕೋ ಕಂಪನಿ (Jobs in Tesco) ರಾಜ್ಯದಲ್ಲಿ ಹೊಸ ವಿತರಣಾ ಕೇಂದ್ರ ತೆರೆಯಲು ಯೋಜಿಸಿದೆ. ಈ ಮೂಲಕ ರಾಜ್ಯದ 16500 ಸಾವಿರ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿಸಿ ಕೊಡಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: BMTC Electric: ಹೊಸ ವರ್ಷಕ್ಕೆ ಬಿಎಂಟಿಸಿಗೆ 320 ಹೊಸ ಎಲೆಕ್ಟ್ರಿಕ್ ಬಸ್ ಸೇರ್ಪಡೆ

ಬೆಂಗಳೂರು ಒಂದರಲ್ಲೇ 1500 ಉದ್ಯೋಗಿಗಳ ನೇಮಕ

ಅದರಲ್ಲೂ ಬೆಂಗಳೂರಿನಲ್ಲಿ ತನ್ನ ವಹಿವಾಟು ವಿಸ್ತರಿಸಿಕೊಳ್ಳಲು ಯೋಜಿಸಿರುವ ಟೆಸ್ಕೋ ಗ್ರೂಪ್ ಬೆಂಗಳೂರು ಒಂದರಲ್ಲೇ 1500 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ.

ಹೊಸಕೋಟೆಯಲ್ಲಿ ಟೆಸ್ಕೋ ಹೊಸ ವಿತರಣಾ ಕೇಂದ್ರ ಸ್ಥಾಪನೆಗೆ ಸಜ್ಜು

jobs in tesco (ಟೆಸ್ಕೋ )

ಇನ್ನು, ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಟೆಸ್ಕೋ ಹೊಸ ವಿತರಣಾ ಕೇಂದ್ರವೊಂದನ್ನು ಸ್ಥಾಪಿಸಲು ಮುಂದಾಗಿದ್ದು, ಇದರಿಂದ ರಾಜ್ಯದ 16500 ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಇದಕ್ಕಾಗಿ ಕಂಪನಿ ಮುಖ್ಯಸ್ಥರು ರಾಜ್ಯ ಸರ್ಕಾರದ ಜತೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ರಾಜ್ಯ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರೇ ಲಂಡನ್ ಅಲ್ಲಿ ಈ ಬಗ್ಗೆ ಖುದ್ದು ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಬಂಡವಾಳ ಶಾಹಿಗಳನ್ನು ಆಕರ್ಷಿಸುವ ಜತೆಗೆ ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸಲು ಮುಂದಾದ ರಾಜ್ಯ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲೂ ‘invest karnataka‘ ರೋಡ್ ಶೋ ಮೂಲಕ ಇನ್ನಿಲ್ಲದ ಪ್ರಯತ್ನ ನಡೆಸಿದೆ.

ಇದಕ್ಕೆ ನಿದರ್ಶನ ಎಂಬಂತೆ ಲಂಡನ್ ಅಲ್ಲಿ ರಾಜ್ಯ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ರೋಡ್ ಶೋದಲ್ಲಿ ಭಾಗಿಯಾಗಿ ಕರ್ನಾಟಕದಲ್ಲಿ ಬಂಡವಾಳ ಹೂಡಲು ವಿವಿಧ ಕಂಪನಿಗಳನ್ನು ಆಕರ್ಷಿಸಿದ್ದಾರೆ.

ಇದನ್ನೂ ಓದಿ: Krishna Byre Gowda : ರಾಜ್ಯದ ರೈತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸಚಿವರು; ನಿಮ್ಮ ಖಾತೆಗೆ ಹಣ..!

ಇನ್ವೆಸ್ಟ್‌ ಕರ್ನಾಟಕ ಅಂತಾರಾಷ್ಟ್ರೀಯ ರೋಡ್‌ ಶೋ

ಇನ್ವೆಸ್ಟ್‌ ಕರ್ನಾಟಕ ಅಂತಾರಾಷ್ಟ್ರೀಯ ರೋಡ್‌ ಶೋ ಭಾಗವಾಗಿ ಲಂಡನ್‌ನಲ್ಲಿ ಎರಡನೇ ದಿನ ರೋಲ್ಸ್ ರಾಯ್ಸ್‌, ಮೆಗೆಲ್ಲನ್ ಏರೋಸ್ಪೇಸ್, ಟೆಸ್ಕೊ ಮತ್ತು ಪಿಯರ್ಸನ್‌ ಕಂಪನಿಗಳ ಮುಖ್ಯಸ್ಥರ ಜತೆ ಸಚಿವರು ಸಮಾಲೋಚನೆ ಸಹ ನಡೆಸಿದ್ದಾರೆ.

ಕರ್ನಾಟಕದಲ್ಲಿ ವಾಹನ ತಯಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶವಿದೆ ಎಂಬುದನ್ನು ಇಂಗ್ಲೆಂಡ್‌ನ ಜಾಗತಿಕ ಕಂಪನಿಗಳಿಗೆ ಮನವರಿಕೆ ಮಾಡಿಕೊಟ್ಟಿರುವ ಸಚಿವ ಎಂ.ಬಿ.ಪಾಟೀಲ್, ರಾಜ್ಯದಲ್ಲಿನ ಮೂಲಸೌಲಭ್ಯ, ಉದ್ಯಮ ಸ್ಥಾಪನೆಗೆ ಪೂರಕ ವಾತಾವರಣ ಮತ್ತು ನಗರೀಕರಣದ ದೂರದೃಷ್ಟಿಯ ಉಪಕ್ರಮಗಳನ್ನು ಪರಿಚಯಿಸಿದ್ದಾರೆ.

ರೋಲ್ಸ್ ರಾಯ್ಸ್ ಗ್ರೂಪ್‌ ಸಭೆಯಲ್ಲಿ ಏರೋಸ್ಪೇಸ್ ಮತ್ತು ರಕ್ಷಣೆ ವಲಯದಲ್ಲಿ ಕರ್ನಾಟಕದಲ್ಲಿ ಲಭ್ಯ ಇರುವ ಅವಕಾಶಗಳ ಬಗ್ಗೆ ಸಚಿವರು ಮನದಟ್ಟು ಮಾಡಿಕೊಟ್ಟಿದ್ದಾರೆ.

ಇಂಗ್ಲೆಂಡ್‌ನ ಪ್ರಮುಖ ಶೈಕ್ಷಣಿಕ ಕಂಪನಿ ಪಿಯರ್ಸನ್ ಗ್ರೂಪ್ ಸಹ ಭಾರತದಲ್ಲಿ ತನ್ನ ಕಾರ್ಯಾಚರಣೆ ವಿಸ್ತರಿಸಲು ಆಸಕ್ತಿ ತೋರಿದೆ ಎನ್ನಲಾಗಿದೆ.

 

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.