ATM Cheater Arrest: ಎಟಿಎಂ ಕಾರ್ಡ್ ಬದಲಿಸಿ ವಂಚಿಸುತ್ತಿದ್ದ ವಂಚಕ ಅಂದರ್!

ಅಂಕೋಲಾ: ಅಂಕೋಲಾ ಠಾಣೆಯ ಪೊಲೀಸರು ಮಿಂಚಿನ‌ ಕಾರ್ಯಾಚರಣೆ ನಡೆಸಿ, ಎಟಿಎಂ ಕಾರ್ಡ್ ಬದಲಿಸಿ ಜನರಿಗೆ ವಂಚನೆ ಮಾಡುತ್ತಿದ್ದ ಅಂತರಜಿಲ್ಲಾ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಅರುಣ ಮಲ್ಲೇಶಪ್ಪ ಬಂಧಿತ ಆರೋಪಿಯಾಗಿದ್ದಾನೆ.…

ಅಂಕೋಲಾ: ಅಂಕೋಲಾ ಠಾಣೆಯ ಪೊಲೀಸರು ಮಿಂಚಿನ‌ ಕಾರ್ಯಾಚರಣೆ ನಡೆಸಿ, ಎಟಿಎಂ ಕಾರ್ಡ್ ಬದಲಿಸಿ ಜನರಿಗೆ ವಂಚನೆ ಮಾಡುತ್ತಿದ್ದ ಅಂತರಜಿಲ್ಲಾ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಅರುಣ ಮಲ್ಲೇಶಪ್ಪ ಬಂಧಿತ ಆರೋಪಿಯಾಗಿದ್ದಾನೆ.

ಆರೋಪಿ ಅರುಣ ಜನರಿಗೆ ಮೋಸದಿಂದ ನಕಲಿ ಎಟಿಎಂ ಕಾರ್ಡ್ ನೀಡಿ ಅವರಿಂದ ಪಡೆದ ಅಸಲಿ ಎಟಿಎಂ ಕಾರ್ಡನಿಂದ ಹಣ ತೆಗೆಯುತ್ತಿದ್ದ. ಈತ ಅಂಕೋಲಾದಲ್ಲಿ ಸುರೇಖಾ ನಾಯ್ಕ ಎಂಬುವವರು ಎಟಿಎಂನಿಂದ ಹಣ ತೆಗೆಯುತ್ತಿದ್ದ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ ಬದಲಿಸಿ 40 ಸಾವಿರ ರೂ ಎಗರಿಸಿದ್ದ. 

ಇದೇ ರೀತಿಯಾಗಿ ಕುಮಟಾದಲ್ಲಿ ಉಮೇಶ ಗೌಡಾ ಎಂಬುವವರು ಎಟಿಎಂ ನಿಂದ ಹಣ ತೆಗೆಯುತ್ತಿದ್ದ ಸಂದರ್ಭದಲ್ಲಿ ಮೋಸಮಾಡಿ ಅವರ ಎಟಿಎಂ ನಿಂದ 37 ಸಾವಿರ ರೂ ಲಪಟಾಯಿಸಿದ್ದು ಈ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ತನಿಖೆ ನಡೆಸಿದ ಪೊಲೀಸರು ಆರೋಪಿಯಿಂದ 25 ಸಾವಿರ ನಗದು, ಒಂದು ಮೊಬೈಲ್ ಮತ್ತು ಎಸ್‌ಬಿಐ ಬ್ಯಾಂಕ್ ಎಟಿಎಂ ಕಾರ್ಡ್ ವಶಕ್ಕೆ ಪಡೆದಿದ್ದಾರೆ. 

Vijayaprabha Mobile App free

ಡೈನಾಮಿಕ್ ಎಸ್ಪಿ ಎಂ.ನಾರಾಯಣ ಇವರ ಸಮರ್ಥವಾದ ಮಾರ್ಗದರ್ಶನ ಡಿವೈಎಸ್ಪಿ ಗಿರೀಶ ಎಸ್ ವಿ ಇವರ ನೇತೃದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್‌ಐಗಳಾದ ಜಯಶ್ರೀ ಪ್ರಭಾಕರ, ಉದ್ದಪ್ಪ ಧರೇಪ್ಪನವರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.