Temple Fight: ಭಕ್ತರ ವಿಚಾರದಲ್ಲಿ ದೇವಸ್ಥಾನದಲ್ಲೇ ಕೈಕೈ ಮಿಲಾಯಿಸಿಕೊಂಡ ಅರ್ಚಕರು!

ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಅರ್ಚಕರಿಬ್ಬರು ದೇವಸ್ಥಾನದ ಗರ್ಭಗುಡಿಯೊಳಗೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದಿದೆ. ಅರ್ಚಕರಾದ ಕಿರಣ್ ಭಟ್ ಪೂಜಾರಿ ಮತ್ತು ವಲ್ಲಭ ಭಟ್…

ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಅರ್ಚಕರಿಬ್ಬರು ದೇವಸ್ಥಾನದ ಗರ್ಭಗುಡಿಯೊಳಗೆ ಪರಸ್ಪರ ಹೊಡೆದಾಡಿಕೊಂಡ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದಿದೆ. ಅರ್ಚಕರಾದ ಕಿರಣ್ ಭಟ್ ಪೂಜಾರಿ ಮತ್ತು ವಲ್ಲಭ ಭಟ್ ಪೂಜಾರಿ ದೇವಸ್ಥಾನದಲ್ಲಿ ಮಾರಮಾರಿ ಮಾಡಿಕೊಂಡವರು.

ಭಕ್ತರನ್ನು ದೇವರ ದರ್ಶನಕ್ಕೆ ಬಿಡುವ ವಿಚಾರದಲ್ಲಿ ಇಬ್ಬರ ಮಧ್ಯೆ ಜಗಳ ನಡೆದಿದೆ. ತಮ್ಮ ಕಡೆಯ ಭಕ್ತರಿಗೆ ಮೊದಲು ಬಿಡಬೇಕು ಎಂದು ಓರ್ವ ಅರ್ಚಕ ಪಟ್ಟು ಹಿಡಿದಿದ್ದರೆ, ನಮ್ಮ ಕಡೆಯ ಭಕ್ತರು ಮೊದಲು ದರ್ಶನಕ್ಕೆ ತೆರಳಬೇಕು ಎಂದು ಇನ್ನೋರ್ವ ಅರ್ಚಕ ಜಗಳ ತೆಗೆದಿದ್ದು, ಮಾತಿಗೆ ಮಾತು ಬೆಳೆದು ಇಬ್ಬರೂ ಕೈಕೈ ಮಿಲಾಯಿಸಿಕೊಂಡಿದ್ದಾರೆ‌.

ಬಳಿಕ ಸ್ಥಳದಲ್ಲಿದ್ದ ಇತರೆ ಅರ್ಚಕರು, ದೇವಸ್ಥಾನ ಸಿಬ್ಬಂದಿ ಇಬ್ಬರ ನಡುವಿನ ಜಗಳ ಬಿಡಿಸಿದ್ದು, ಅರ್ಚಕರ ಹೊಡೆದಾಟ ದೇವಸ್ಥಾನದ ಸಿಸಿಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಸಂಬಂಧ ಗಾಣಗಾಪುರ ಪೊಲೀಸರು ಇಬ್ಬರೂ ಅರ್ಚಕರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ‌.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.