Udyogini yojana : ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆ. ಅಂತಹ ಒಂದು ಯೋಜನೆಯಲ್ಲಿ ಉದ್ಯೋಗಿನಿ ಯೋಜನೆಯು (Udyogini yojana) ಒಂದಾಗಿದ್ದು ಇದು ಗ್ರಾಮೀಣ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿನ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ನೀಡುತ್ತದೆ.
ಇದನ್ನೂ ಓದಿ: PF withdrawal | ಪಿಎಫ್ ಹಣ ವಿತ್ ಡ್ರಾ ಮಾಡಬೇಕಾ..? ಇನ್ಮೇಲೆ ನೀವೇ ಸುಲಭವಾಗಿ ಸ್ವತಃ ಅಪ್ರುವಲ್ ಮಾಡಿಕೊಳ್ಳಬಹುದು..!
ಈ ಯೋಜನೆಯಡಿ, ಫಲಾನುಭವಿಗಳು ವಿವಿಧ ಕ್ಷೇತ್ರಗಳಲ್ಲಿ ವ್ಯವಹಾರಗಳನ್ನು ಪ್ರಾರಂಭಿಸಲು ಸಾಲಗಳನ್ನು ಪಡೆಯಬಹುದು. ವಿವಿಧ ವರ್ಗಗಳ ಮಹಿಳೆಯರಿಗೆ ಬಡ್ಡಿರಹಿತ ವ್ಯವಹಾರ ಸಾಲಗಳನ್ನು ನೀಡುವಂತೆ ಸರ್ಕಾರ ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು (Documents required for Udyogini yojana)
ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಈ ದಾಖಲೆಗಳನ್ನು ಹೊಂದಿರಬೇಕು. ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ವಿಳಾಸ ಹಾಗೂ ಆದಾಯ ಪುರಾವೆ, ಬಿಪಿಎಲ್ ಕಾರ್ಡ್ ಅಥವಾ ರೇಷನ್ ಕಾರ್ಡ್ (ಅರ್ಜಿದಾರರು ಬಿಪಿಎಲ್ಎಲ್ ಹೊಂದಿರಬೇಕಾಗುತ್ತದೆ),
ಎಸ್ಟಿ/ ಎಸ್ಸಿ ಮಹಿಳೆಯರಾಗಿದ್ದರೆ ಜಾತಿ ಪ್ರಮಾಣಪತ್ರ ಕಡ್ಡಾಯ, ಬ್ಯಾಂಕ್ ಪಾಸ್ಬುಕ್ನ ಪ್ರತಿ ( ಬ್ಯಾಂಕ್ ವಿವರ, ಅಕೌಂಟ್ ನಂಬರ್, ಐಎಫ್ಎಸ್ಸಿ ನಂಬರ್, ಎಂಐಸಿಆರ್ ನಂಬರ್ ಇರುವಂತದ್ದು), ಬ್ಯಾಂಕ್ ಅಥವಾ ಎನ್ಬಿಎಫ್ಸಿಯ ಇತರೆ ದಾಖಲೆಗಳು.
ಇದನ್ನೂ ಓದಿ: ಕಾರ್ಮಿಕರೇ ಗಮನಿಸಿ: ನಿಮ್ಮ ಬಳಿ ಇ-ಶ್ರಮ್ ಕಾರ್ಡ್ ಇದ್ರೆ ಪ್ರತಿ ತಿಂಗಳು ಸಿಗಲಿದೆ 3000..!
ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಪಡೆಯುವ ಪ್ರಯೋಜನಗಳು (Udyogini yojana benefits)
ಉದ್ಯೋಗಿನಿ ಯೋಜನೆಯ ಕೆಲವು ಪ್ರಯೋಜನಗಳು ಇಲ್ಲಿವೆ. ಈ ಯೋಜನೆಯಡಿ 3 ಲಕ್ಷ ರೂ.ಗಳವರೆಗೆ ಸಾಲವನ್ನು ಪಡೆಯಬಹುದು. ಸಾಲದ ಮೊತ್ತ ಮರುಪಾವತಿಸುವಾಗ 30% ಸಬ್ಸಿಡಿ ನೀಡುತ್ತದೆ.
88 ಸಣ್ಣ ಪ್ರಮಾಣದ ಕೈಗಾರಿಕೆಗಳ ಅಡಿಯಲ್ಲಿ ವರ್ಗೀಕರಿಸಿದ ವ್ಯವಹಾರವನ್ನು ಪ್ರಾರಂಭಿಸಬಹುದು. ಕೃಷಿ ಕ್ಷೇತ್ರದಲ್ಲಿ ವ್ಯವಹಾರ ಪ್ರಾರಂಭಿಸಲು ಬಯಸಿದರೆ ಬಡ್ಡಿರಹಿತ ಸಾಲಗಳು ಲಭ್ಯವಿದೆ. ವ್ಯವಹಾರ ಯೋಜನೆ, ಕಾರ್ಯಸಾಧ್ಯತೆ, ವೆಚ್ಚ ಮತ್ತು ಹೆಚ್ಚಿನವುಗಳ ಬಗ್ಗೆ ಮಹಿಳೆಯರಿಗೆ ಕ್ರಿಯಾತ್ಮಕ ಕೌಶಲ್ಯಗಳನ್ನು ತಿಳಿಸುವ ಗುರಿಯನ್ನು ಇದು ಹೊಂದಿದೆ.
ಇದನ್ನೂ ಓದಿ: Home Loan | ನಿಮ್ಮ ಕನಸಿನ ಮನೆಗಾಗಿ ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆಯುತ್ತೀರಾ? ಈ ವಿಷಯಗಳನ್ನು ಮರೆಯಲೇಬೇಡಿ..!
ಉದ್ಯೋಗಿನಿ ಯೋಜನೆಯಡಿ ಈ ಎಲ್ಲಾ ಉದ್ಯಮಗಳಿಗೆ ಸಾಲ ಪಡೆಯಬಹುದು
ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ 88ಕ್ಕೂ ಹೆಚ್ಚು ಪ್ರಮಾಣದ ಸಣ್ಣ ಉದ್ಯಮಗಳ ಆರಂಭಕ್ಕೆ ಸಾಲ ಸಿಗಲಿದ್ದು, ಅಗರಬತ್ತಿ ತಯಾರಿಕೆ, ಬೇಕರಿ, ಡ್ರೈ ಕ್ಲೀನಿಂಗ್, ಮೀನು ಮಾರಾಟ, ದಿನಸಿ ಅಂಗಡಿ, ಬೆಡ್ ಶೀಟ್ ಮತ್ತು ಟವೆಲ್ ತಯಾರಿಕೆ, ಕಾಫಿ -ಟೀ ಅಂಗಡಿ, ಟೈಲರಿಂಗ್, ಎಸ್ಟಿಡಿ ಬೂತ್, ಉಪ್ಪಿನಕಾಯಿ ತಯಾರಿಕೆ, ಬ್ಯೂಟಿ ಪಾರ್ಲರ್, ಹಿಟ್ಟಿನ ಗಿರಣಿ, ಪೋಟೋ ಸ್ಟೂಡಿಯೋ, ಬಿದಿರಿನ ವಸ್ತುಗಳ ತಯಾರಿಕೆ, ಚಪ್ಪಲಿ ಮಾರಾಟ ಮಳಿಗೆ, ತೆಂಗಿನಕಾಯಿ ಅಂಗಡಿ, ಹತ್ತಿ ದಾರ ತಯಾರಿಕೆ, ಹೈನುಗಾರಿಕೆ ಮತ್ತು ಕೋಳಿ ವ್ಯಾಪಾರ ಇತ್ಯಾದಿ.
ಇದನ್ನೂ ಓದಿ: Post Office Savings Scheme | ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಹೇಗೆ ಪ್ರಾರಂಭವಾಯಿತು? ಹೇಗೆ ಕಾರ್ಯನಿರ್ವಹಿಸುತ್ತದೆ?
ಉದ್ಯೋಗಿನಿ ಯೋಜನೆಯಿಂದ 3 ಲಕ್ಷ ಉಚಿತ ಲೋನ್ ಹೇಗೆ ಪಡೆಯಬಹುದು?
ಇತ್ತೀಚೆಗೆ ಭಾರತದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಮಹಿಳೆಯರನ್ನು ಸಬಲೀಕರಣಗೊಳಿಸಲು ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಉದ್ಯೋಗಿನಿ ಯೋಜನೆಯೂ ಒಂದು.
ಈ ಯೋಜನೆಯು ಬಡ ಮಹಿಳಾ ಉದ್ಯಮಿಗಳಿಗೆ ಆರ್ಥಿಕ ನೆರವಿನೊಂದಿಗೆ ವ್ಯವಹಾರಗಳನ್ನು ಪ್ರಾರಂಭಿಸಲು ಅವಕಾಶ ನೀಡುತ್ತದೆ. ಉದ್ಯೋಗಿನಿ ಯೋಜನೆಯಿಂದ 3 ಲಕ್ಷ ಲೋನ್ ಹೇಗೆ ಪಡೆಯಬಹುದು ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.
ಕೃಪೆ: ffreedom app – Money