Pradhan Mantri Avas Yojana | ಈ ಯೋಜನೆಯಡಿ ಸ್ವಂತ ಮನೆ ಪಡೆಯುವುದು ಹೇಗೆ? ಅನರ್ಹರು ಯಾರು ..?

Pradhan Mantri Avas Yojana : ಸ್ವಂತ ಮನೆ ಹೊಂದಬೇಕೆನ್ನುವುದು ಪ್ರತಿಯೊಬ್ಬರ ಜೀವನದ ಕನಸಾಗಿರುತ್ತದೆ. ಆದರೆ ಆರ್ಥಿಕವಾಗಿ ಸಬಲರಲ್ಲದ ಅನೇಕ ಜನರ ಸ್ವಂತ ಮನೆ ಕನಸು, ಕನಸಾಗಿಯೇ ಉಳಿದುಬಿಡುತ್ತದೆ. ಆದರೆ, ಜನಸಾಮಾನ್ಯರ ಸ್ವಂತ ಮನೆ…

Pradhan Mantri Avas Yojana

Pradhan Mantri Avas Yojana : ಸ್ವಂತ ಮನೆ ಹೊಂದಬೇಕೆನ್ನುವುದು ಪ್ರತಿಯೊಬ್ಬರ ಜೀವನದ ಕನಸಾಗಿರುತ್ತದೆ. ಆದರೆ ಆರ್ಥಿಕವಾಗಿ ಸಬಲರಲ್ಲದ ಅನೇಕ ಜನರ ಸ್ವಂತ ಮನೆ ಕನಸು, ಕನಸಾಗಿಯೇ ಉಳಿದುಬಿಡುತ್ತದೆ.

ಆದರೆ, ಜನಸಾಮಾನ್ಯರ ಸ್ವಂತ ಮನೆ ಕನಸನ್ನು ನನಸಾಗಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಅವಾಸ ಯೋಜನೆ ಪ್ರಾರಂಭಿಸಿದ್ದು, ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ.

Pradhan Mantri Avas Yojana : ಪ್ರಧಾನ ಮಂತ್ರಿ ಆವಾಸ್ ಗ್ರಾಮೀಣ ಯೋಜನೆ ವಿಸ್ತರಣೆ!

ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಬಡವರಿಗೆ ಕೈಗೆಟಕುವ ದರದಲ್ಲಿ ವಸತಿ ಒದಗಿಸಲು ಜಾರಿಗೆ ಬಂದ ಯೋಜನೆಯಾಗಿದ್ದು, ಈ ಯೋಜನೆಯನ್ನು 1985 ರಲ್ಲಿ ” ಇಂದಿರಾ ಆವಾಸ್ ಯೋಜನೆ ” ಎಂದು ಪ್ರಾರಂಭಿಸಲಾಯಿತು. ನಂತರ ಇದರ ಹೆಸರನ್ನು ಬದಲಿಸಲಾಯಿಸಲಾಗಿದ್ದು, PMAYG ಮಿಷನ್ ಅನ್ನು ಈಗ 2024 ರವರೆಗೆ ವಿಸ್ತರಿಸಲಾಗಿದೆ.

Vijayaprabha Mobile App free

ಇದನ್ನೂ ಓದಿ: Gram suraksha yojana | ಗ್ರಾಮ ಸುರಕ್ಷಾ ಯೋಜನೆಯಡಿ 35 ಲಕ್ಷ ಲಾಭ ಪಡೆಯುವುದು ಹೇಗೆ? ಅರ್ಹತೆ, ವಯಸ್ಸಿನ ಮಿತಿ ಏನು?

ಇದು ಲಕ್ಷಾಂತರ ಹಳ್ಳಿಯ ನಿವಾಸಿಗಳಿಗೆ ಪ್ರಯೋಜನವನ್ನು ನೀಡುವುದಲ್ಲದೆ, ಈ ಯೋಜನೆ ಎಲ್ಲಾ ಅರ್ಹ ಗ್ರಾಮೀಣ ಕುಟುಂಬಗಳಿಗೆ ನೀರು, ನೈರ್ಮಲ್ಯ ಮತ್ತು ವಿದ್ಯುತ್ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಪಕ್ಕಾ ಮನೆಗಳನ್ನು ಒದಗಿಸಲು ಪ್ರಯತ್ನಿಸುತ್ತದೆ.

Pradhan Mantri Avas Yojana : ಪಿಎಂ ಆವಾಸ್ ಯೋಜನೆಯ ಫಲಾನುಭವಿಗಳಾಗಲು ಇವರು ಅನರ್ಹರು!

2015ರಲ್ಲಿ ಆರಂಭಗೊಂಡ ಪಿಎಂ ಆವಾಸ್ ಯೋಜನೆ 2024ರ ಡಿಸೆಂಬರ್​ವರೆಗೂ ವಿಸ್ತರಣೆಯಾಗಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ ಮತ್ತು ಗ್ರಾಮೀಣ ಎಂದು ಪ್ರತ್ಯೇಕಗೊಳಿಸಲಾಗಿದೆ. ಫಲಾನುಭವಿಗಳಿಗೆ ಅರ್ಹತಾ ಮಾನದಂಡಗಳನ್ನೂ ಕೂಡಾ ಈ ವೇಳೆ ಬದಲಿಸಲಾಗಿದೆ.

ಇದನ್ನೂ ಓದಿ: Aadhaar Update | ಇನ್ಮುಂದೆ ಆಧಾರ್ ಅಪ್‌ಡೇಟ್ ಅಷ್ಟು ಸುಲಭವಲ್ಲ; ಈ ನಿಯಮ ಎಲ್ಲರೂ ತಿಳಿದುಕೊಳ್ಳಲೇಬೇಕು!

ಇನ್ನು, ಮೋಟಾರು ವಾಹನ, ಎರಡಕ್ಕಿಂತ ಹೆಚ್ಚು ಬೈಕ್, ಸ್ಕೋಟರ್ ಮತ್ತು ಕೃಷಿ ಯಂತ್ರೋಪಕರಣವನ್ನು ಹೊಂದಿದವರು ಹಾಗು ರೂ 50,000 ಹಾಗು ಅದಕ್ಕಿಂತ ಹೆಚ್ಚು ಲಿಮಿಟ್ ಇರುವ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದವರು. ಪ್ರಾಪರ್ಟಿ ಟ್ಯಾಕ್ಸ್ ಕಟ್ಟುವವರು ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲ.

Pradhan Mantri Avas Yojana : ಪ್ರಧಾನಮಂತ್ರಿ ಆವಾಸ್ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ಬಡತನ ರೇಖೆಗಿಂತ ಕೆಳಗಿರುವ ಮತ್ತು ಸ್ವಂತ ಮನೆ ನಿರ್ಮಿಸಲು ಸಾಧ್ಯವಾಗದ ಜನರು ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ ಸ್ವಂತ ಮನೆ ನಿರ್ಮಿಸಿಕೊಳ್ಳಬಹುದು. ಭೂರಹಿತ ಕುಟುಂಬಗಳು, ಪರಿಶಿಷ್ಟ ಜಾತಿ, ಪಂಗಡ, ಇತರೆ, ಅಲ್ಪಸಂಖ್ಯಾತರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು. ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಿಮಗೆ ಮನೆಯಲ್ಲಿ ಸಾಧ್ಯವಾಗದಿದ್ದರೆ, ನೀವು ಮೇಲಿನ ಎಲ್ಲಾ ದಾಖಲೆಗಳೊಂದಿಗ ಸಾರ್ವಜನಿಕ ಸೇವಾ ಕೇಂದ್ರಕ್ಕೆ ಹೋಗಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ವಿಡಿಯೋ ಕೃಪೆ- Masth Magaa

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.