IPL Mega Auction 2025: ನವೆಂಬರ್ 24 ಮತ್ತು 25 ರಂದು ಜೆಡ್ಡಾದಲ್ಲಿ (ಸೌದಿ ಅರೇಬಿಯಾ) ನಡೆಯಲಿರುವ ಐಪಿಎಲ್ 2025 ಮೆಗಾ ಹರಾಜು ನಡೆಯಲಿದ್ದು, ಹರಾಜಿಗೆ 574 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.
ಹೌದು, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹರಾಜಿಗೆ ನೋಂದಣಿಯಾಗಿರುವ ಆಟಗಾರರ ಶಾರ್ಟ್ ಲಿಸ್ಟ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಂತೆ IPL ಮೆಗಾ ಹರಾಜಿಗೆ ಒಟ್ಟು 574 ಆಟಗಾರರ ಅಂತಿಮ ಪಟ್ಟಿಯನ್ನು ಸಿದ್ದಗೊಳಿಸಲಾಗಿದೆ.
ಇದನ್ನೂ ಓದಿ: IPL Mega Auction : IPL ಮೆಗಾ ಹರಾಜು ಎಲ್ಲಿ? ಯಾವಾಗ?
ಈ ಪಟ್ಟಿಯಲ್ಲಿನ 48 ಭಾರತೀಯ ಕ್ಯಾಪ್ಡ್ ಆಟಗಾರರು, 318 ಅನ್‌ಕ್ಯಾಪ್ಡ್ ಭಾರತೀಯ ಆಟಗಾರರು ಸೇರಿದ್ದಾರೆ.ಉಳಿದಂತೆ 208 ವಿದೇಶಿ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ಇದರಲ್ಲಿ 12 ವಿದೇಶಿ ಅನ್‌ಕ್ಯಾಪ್ ಆಟಗಾರರು ಸೇರಿದ್ದಾರೆ.
IPL Mega Auction 2025: ₹2 ಕೋಟಿ ಬೇಸ್ ಪ್ರೈಸ್’ನಲ್ಲಿ 81 ಆಟಗಾರರು
ಮೆಗಾ ಹರಾಜಿನಲ್ಲಿ ಪಟ್ಟಿ ಮಾಡಲಾದ ಆಟಗಾರರ ಪಟ್ಟಿಯನ್ನು IPL ಬಿಡುಗಡೆ ಮಾಡಿದ್ದು, ₹2 ಕೋಟಿ ಮೂಲ ಬೆಲೆಯಲ್ಲಿ 81 ಮಂದಿ, ₹1.50 ಕೋಟಿಯಲ್ಲಿ 27 ಮಂದಿ, ₹1.25 ಕೋಟಿ ಬೆಲೆಯಲ್ಲಿ 18 ಮಂದಿ ಇದ್ದಾರೆ.
ಇನ್ನು, ರೂ ₹1 ಕೋಟಿ ಬೆಲೆಯಲ್ಲಿ 23 ಮಂದಿ, ₹75 ಲಕ್ಷ ವಿಭಾಗದಲ್ಲಿ 92 ಮಂದಿ, ₹50 ಲಕ್ಷದಲ್ಲಿ 8 ಮಂದಿ, ₹40 ಲಕ್ಷ ಬೆಲೆಯಲ್ಲಿ, ₹30 ಲಕ್ಷದ ಬೆಲೆಯಲ್ಲಿ 320 ಜನರಿದ್ದು, 48 ಕ್ಯಾಪ್ಡ್, 193 ವಿದೇಶಿ ಕ್ಯಾಪ್ಡ್ ಮತ್ತು 318 ಭಾರತೀಯ ಅನ್‌ಕ್ಯಾಪ್ಡ್ ಆಟಗಾರರು ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ: IPL 2025 Retention List : ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರು ಇವರೇ; ಆರ್‌ಸಿಬಿ ಉಳಿಸಿಕೊಂಡದ್ದು ಯಾರನ್ನು?