6 ಕೋಟಿ ವಂಚನೆ | ಅಡಿಕೆ ವ್ಯಾಪಾರಿ ಆತ್ಮಹತ್ಯೆ | ದುರ್ಗದಲ್ಲಿ ಸಾವಿನ ಮಿಷ್ಟರಿ

ವಿಜಯಪ್ರಭ.ಕಾಂ, ಚಿತ್ರದುರ್ಗ: ಹಣಕಾಸು ವಿಚಾರಕ್ಕೆ ಇತ್ತೀಚೆಗೆ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರಾಮಾಣಿಕವಾಗಿದ್ದವರೂ ಕೂಡ ಹಣದ ವಿಚಾರದಲ್ಲಿ ವಂಚನೆಗೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಸಾಕಷ್ಟು ನಡೆಯುತ್ತಿವೆ. ಚಿತ್ರದುರ್ಗದ ಅಡಿಕೆ ವ್ಯಾಪಾರಿ ಕೂಡ ವಂಚನೆ ಕಾರಣ…

areca-nut-trader-commits-suicide-chitradurga

ವಿಜಯಪ್ರಭ.ಕಾಂ, ಚಿತ್ರದುರ್ಗ: ಹಣಕಾಸು ವಿಚಾರಕ್ಕೆ ಇತ್ತೀಚೆಗೆ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರಾಮಾಣಿಕವಾಗಿದ್ದವರೂ ಕೂಡ ಹಣದ ವಿಚಾರದಲ್ಲಿ ವಂಚನೆಗೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಸಾಕಷ್ಟು ನಡೆಯುತ್ತಿವೆ. ಚಿತ್ರದುರ್ಗದ ಅಡಿಕೆ ವ್ಯಾಪಾರಿ ಕೂಡ ವಂಚನೆ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಚಿತ್ರದುರ್ಗದಲ್ಲಿ ವ್ಯಾಪಾರಿ ಮೋಸ ಮಾಡಿದ ಕಾರಣಕ್ಕೆ ಮನನೊಂದು ಚಿತ್ರದುರ್ಗ ಜಿಲ್ಲೆ ಸಿದ್ಧಾಪುರ ಗ್ರಾಮದ 41 ವರ್ಷದ ಅಡಿಕೆ ವ್ಯಾಪಾರಿ  ಶೈಲೇಶ್ ಕುಮಾರ್  ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಚಿತ್ರದುರ್ಗದ ಅಡಿಕೆ ವ್ಯಾಪಾರಿ ಉದಯ್‌ ಕುಮಾರ್‌ ಎಂಬುವವರು 6 ಕೋಟಿ ರೂಪಾಯಿ ವಂಚನೆ ಮಾಡಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಶೈಲೇಶ್ ಕುಮಾರ್ ಡೆತ್‌ ನೋಟ್‌ ನಲ್ಲಿ ಉಲ್ಲೇಖ ಮಾಡಿದ್ದು, ಸದ್ಯ ಉದಯ್‌ ಕುಮಾರ್‌ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶೈಲೇಶ್ ಕುಮಾರ್ ಅಡಿಕೆ ಗೋದಾಮಿನಲ್ಲಿ ಬುಧವಾರ ಸಂಜೆ ಸುಮಾರು 4 ಗಂಟೆಗೆ ಆತ್ಯಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.  ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉದ್ಯಮಿ ಉದಯ್ ಶೆಟ್ಟಿ ನಾಪತ್ತೆಯಾಗಿದ್ದಾರೆ. ಈ  ಪ್ರಕರಣ ಭೀಮಸಮುದ್ರ ಅಡಿಕೆ ವ್ಯಾಪಾರಿಗಳು ಹಾಗೂ  ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

Vijayaprabha Mobile App free

ಅಡಿಕೆ ವ್ಯಾಪಾರಿ ಆತ್ಮಹತ್ಯೆಯ ಸುತ್ತಮುತ್ತ

ಚಿತ್ರದುರ್ಗದ ಕೆಳಗೋಟೆ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಉದಯ ಶೆಟ್ಟಿ ಮಾಲೀಕತ್ವದ  ಟ್ರೇಡರ್ಸ್‌ಗೆ ಶೈಲೇಶ್ ಕುಮಾರ್ ಹಲವು ವರ್ಷಗಳಿಂದ ಮಾರಾಟ ಮಾಡುತ್ತಿದ್ದರು. ಮೊದಲ ವರ್ಷಗಳಲ್ಲಿ ಹಣ ಪಾವತಿಸುತ್ತಿದ್ದ ಉದ್ಯಮಿ ಉದಯ್ ಶೆಟ್ಟಿ ನಂತರದಲ್ಲಿ ದಿನಗಳಲ್ಲಿ ಸತಾಯಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಸುಮಾರು ಒಂದೂವರೆ ಎರಡು ತಿಂಗಳ ಹಿಂದೆ ಮೃತ ಶೈಲೇಶ್ ಕುಮಾರ್, ಉದಯ ಶೆಟ್ಟಿ ಮಾಲೀಕತ್ವದ ಟ್ರೇಡರ್ಸ್‌ಗೆ 6.60 ಕೋಟಿ ಮೊತ್ತದ ಅಡಕೆ ಮಾರಾಟ ಮಾಡಿದ್ದರು. ಈ ಹಣ ಕೇಳಲು ಹೋದಾಗಲೆಲ್ಲ ಹಣ ಕೊಡದೇ ಸತಾಯಿಸಿ, ನಿಂದಿಸುತ್ತಿದ್ದರು ಎನ್ನಲಾಗಿದೆ.

ಉದ್ಯಮಿ ಉದಯ ಶೆಟ್ಟಿ ಹಣ ಪಡೆದುಕೊಂಡು ಬರುವುದಾಗಿ ಬುಧವಾರ ಬೆಳಗ್ಗೆ ಸಿದ್ದಾಪುರದ ತಮ್ಮ ಮನೆಯಿಂದ ವ್ಯಾನ್‌ನಲ್ಲಿ ಚಿತ್ರದುರ್ಗಕ್ಕೆ ಹೋಗಿದ್ದಾರೆ. ಪುನಃ 11 ಗಂಟೆ ಸುಮಾರಿಗೆ ಸಿದ್ದಾಪುರಕ್ಕೆ ವಾಪಸಾಗಿ, ಬೇಸರದಲ್ಲಿದ್ದರು ಎನ್ನಲಾಗಿದೆ. ನಂತರ ಅಡಕೆ ಗೋದಾಮು ಕಡೆ ತೆರಳಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಪತ್ನಿ ಚೈತ್ರಾ ಅವರು ಕರೆ ಮಾಡಿದಾಗಲೂ ಸ್ವೀಕರಿಸಿಲ್ಲ. ಆಗ ಗುಮಾಸ್ತರನ್ನು ನೋಡಿಕೊಂಡು ಬರುವಂತೆ ಕಳುಹಿಸಿದ್ದುಘಿ, ಆತ ಬಂದು ಗಮನಿಸಿದಾಗ ಶೈಲೇಶ್ ಕುಮಾರ್ ನೇಣು ಹಾಕಿಕೊಂಡು ಮೃತಪಟ್ಟಿರುವುದು ಕಂಡು ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಡಿಕೆ ವ್ಯಾಪಾರಿ ಸಂಬಂಧಿಕರ ಅಳಲು

ಮೃತ ಶೈಲೇಶ್ ಸಹೋದರ ಸಂತೋಷ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅಡಿಕೆ ಉದ್ಯಮಿ ಉದಯ ಶೆಟ್ಟಿ ಎಂಬುವವರ ಮೇಲೆ  ತಡರಾತ್ರಿ ಕೇಸ್‌ ನೀಡಲಾಗಿದೆ. ಕೆಲವರು ನಮಗೆ ಹಣ ನೀಡಿ, ಸಂಧಾನ ಮಾಡಿಕೊಳ್ಳಲು ಆಮಿಷವೊಡ್ಡಿದರು. ನಾವು ಯಾವುದೇ ಕಾರಣಕ್ಕೂ ಅದಕ್ಕೆ ಒಪ್ಪುವುದಿಲ್ಲ.  ಉದಯ ಶೆಟ್ಟಿ ನಮ್ಮ ಅಣ್ಣನ ಆತ್ಮಹತ್ಯೆಗೆ ನೇರ ಹೊಣೆ. ನಮಗೆ 6.60 ಕೋಟಿ ರೂ. ವಾಪಸ್ ನೀಡಬೇಕು ಹಾಗೂ ಆರೋಪಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಅಡಿಕೆ ವ್ಯಾಪಾರಿ ಡೆತ್‌ನೋಟ್‌ ನ ವಿವರ

‘ಈ ನನ್ನ ಸಾವಿಗೆ ಮುಖ್ಯ ಕಾರಣ ಚಿತ್ರದುರ್ಗದ ಅಡಿಕೆ ವರ್ತಕನಾದ ಉದಯ ಶೆಟ್ಟಿ, ನನಗೆ ಸುಮಾರು 6 ಕೋಟಿ 60 ಲಕ್ಷ ಮೌಲ್ಯದ ಅಡಿಕೆಯನ್ನು ನನ್ನಿಂದ ಖರೀದಿ ಮಾಡಿ ಹಣವನ್ನು ಪಾವತಿಸಿರುವುದಿಲ್ಲ. ಹಣವನ್ನು ಕೇಳಲು ಹೋದಾಗ ಅವಾಚ್ಯ ಶಬ್ದಗಳಿಂದ ಬೈದು ಕಳುಹಿಸಿರುತ್ತಾನೆ. ಬೇರೆಯವರಿಗೆ ಹಣ ಪಾವತಿಸುವ ಒತ್ತಡವಿದ್ದ ಕಾರಣ ನನಗೆ ಬೇರೆ ದಾರಿ ಕಾಣದೇ ಸಾಯುವ ನಿರ್ಧಾರ ಮಾಡಿದ್ದೇನೆ. ನನ್ನ ಸಾವಿಗೆ ಉದಯ ಶೆಟ್ಟಿಯೇ ಕಾರಣʼ ಎಂದು ಶೈಲೇಶ್ ಕುಮಾರ್ ಬರೆದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.