Leopard Attack: ಚಿರತೆ ದಾಳಿಯಿಂದ ವ್ಯಕ್ತಿಗೆ ಗಾಯ

ಹೊನ್ನಾವರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಚಿರತೆ ಕಾಟ ಹೆಚ್ಚುತ್ತಲೇ ಇದ್ದು, ಇಷ್ಟು ದಿನ ನಾಯಿ ಹಸುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯು ಇತ್ತೀಚೆಗೆ ಒಂಟಿಯಾಗಿ ಹೋಗುತ್ತಿರುವವರ ಮೇಲೆ ದಾಳಿ ಮಾಡುತ್ತಿರುವುದು ಆತಂಕಕಾರಿಯಾಗಿದೆ. ಸೋಮವಾರ ರಾತ್ರಿ…

ಹೊನ್ನಾವರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಚಿರತೆ ಕಾಟ ಹೆಚ್ಚುತ್ತಲೇ ಇದ್ದು, ಇಷ್ಟು ದಿನ ನಾಯಿ ಹಸುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯು ಇತ್ತೀಚೆಗೆ ಒಂಟಿಯಾಗಿ ಹೋಗುತ್ತಿರುವವರ ಮೇಲೆ ದಾಳಿ ಮಾಡುತ್ತಿರುವುದು ಆತಂಕಕಾರಿಯಾಗಿದೆ.

ಸೋಮವಾರ ರಾತ್ರಿ ತಾಲೂಕಿನ ಸಂತೇಗುಳಿ ಸಮೀಪ ಕೆರೆಕೋಣ ನಿವಾಸಿಯಾಗಿರುವ ಶಿಕ್ಷಕ ಪ್ರಶಾಂತ ಆರ್ ಭಟ್ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಕಾಲಿನ ಭಾಗಕ್ಕೆ ಗಾಯವಾಗಿದೆ. ಹೊನ್ನಾವರಕ್ಕೆ ಹೋಗಿ ವಾಪಸ್ ಮನೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಸಂತೆಗುಳಿ ಸಮೀಪ ಚಿರತೆ ದಾಳಿ ಮಾಡಿ ಕಾಲಿನ ಭಾಗಕ್ಕೆ ಗಾಯಗೊಳಿಸಿದ್ದು, ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. 

ಸಾಸ್ಕೋಡ್ ಗ್ರಾಮದಲ್ಲಿ ಕಳೆದೊಂದು ವರ್ಷದಲ್ಲಿ ಆರು ಜನರ ಮೇಲೆ ಕಾಡುಪ್ರಾಣಿಗಳಿಂದ ದಾಳಿಯಾಗಿದೆ. ಅಲ್ಲದೇ ರೈತರು ಬೆಳೆದ ಬೆಳೆ ಹಾನಿ ಆಗುತ್ತಿದ್ದು, ಈ ಬಗ್ಗೆ ಪ್ರಾಣಿಗಳ ಉಪಟಳ ನಿಯಂತ್ರಿಸಬೇಕೆಂದು ಆಗ್ರಹಿಸಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.