Deepavali Date And Time 2024: ಬೆಳಕಿನ ಹಬ್ಬ ದೀಪಾವಳಿ 2024ಕ್ಕೆ ದಿನ ಗಣನೆ ಆರಂಭವಾಗಿದೆ. ಕತ್ತಲನು ದೂರ ಮಾಡಿ ಬದುಕಿನಲ್ಲಿ ಬೆಳಕು ಆವರಿಸಲಿ ಎಂಬ ಉದ್ದೇಶದಿಂದ ಹಿಂದೂ ಗಳು ಪವಿತ್ರ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ದೇಶದ ಹಲವು ಭಾಗಗಳಲ್ಲಿ ಹಲವು ರೀತಿ ದೀಪಾವಳಿ ಹಬ್ಬ ಆಚರಿಸುವ ಸಂಪ್ರದಾಯವಿದೆ.
ಈ ವರ್ಷದ ದೀಪಾವಳಿ ಆಚರಣೆಯ ದಿನಾಂಕದ ಬಗ್ಗೆ ಹಲವು ಸಂದೇಹಗಳಿವೆ. ದೀಪಾವಳಿಯ ನಿಖರ ದಿನಾಂಕ ಯಾವುದು ಎಂಬ ಸಂದೇಹಕ್ಕೆ ಇಲ್ಲಿದೆ ಉತ್ತರ.
2024ರಲ್ಲಿ ದಿಪಾವಳಿಯನ್ನು ಅಕ್ಟೋಬರ್ 31ರಂದು ಆಚರಿಸುವುದು ಸೂಕ್ತ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ವಕ್ತಾರ ಶರದ್ ಶರ್ಮಾ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
” ಈ ವರ್ಷ 14ನೇ ದಿನದೊಳೆಗೆ ಅಮವಾಸ್ಯೆ ಸೇರಿಕೊಳ್ಳುತ್ತದೆ. ಆದ್ದರಿಂದ ದೀಪಾವಳಿಯನ್ನು ಅಕ್ಟೋಬರ್ 31 ರ ರಾತ್ರಿ ಆಚರಿಸುವುದು ಸೂಕ್ತ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ವಕ್ತಾರ ಶರದ್ ಶರ್ಮಾ ಮಾಹಿತಿ ನೀಡಿದ್ದಾರೆ. ಉತ್ತರ ಭಾರತದಲ್ಲಿ ಹಲವು ಭಾಗಗಳಲ್ಲಿ ಅಕ್ಟೋಬರ್ 31 ರ ರಾತ್ರಿ ದೀಪಾವಳಿ ಆಚರಣೆಗೆ ಚಾಲನೆ ನೀಡಲಾಗುತ್ತದೆ. ಆದರೆ ನಮ್ಮ ಕರ್ನಾಟಕದಲ್ಲಿ ನ.1ರಂದು ದೀಪಾವಳಿ ಆಚರಿಸಲಾಗುತ್ತದೆ.
Read This: ವಿಶ್ವದಲ್ಲಿ ಅತಿ ಹೆಚ್ಚು ಚಿನ್ನದ ಮೀಸಲು ಹೊಂದಿರುವ ದೇಶಗಳು ಯಾವುವು?
ಕರ್ನಾಟಕದಲ್ಲಿ ದೀಪಾವಳಿ ಆಚರಣೆ ದಿನಾಂಕ ಹಾಗೂ ಸಮಯ
Deepavali Date And Time 2024: ಚಾಂದ್ರಮಾನ ತಿಂಗಳು ಅಶ್ವಿನ್ ಹಾಗೂ ಕಾರ್ತಿಕದಲ್ಲಿದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ಪ್ರತಿ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ನಡುವೆ ದೀಪಾವಳಿ ಆಚರಿಸಲಾಗುತ್ತದೆ. ನಮ್ಮ ಪ್ರಾಚೀನ ಹಿಂದೂ (ದಿನದರ್ಶಿ) ಕ್ಯಾಲೆಂಡರ್ ಪ್ರಕಾರ ಪ್ರತಿವರ್ಷ ಅಮವಾಸ್ಯೆಯಂದು ದೀಪಾವಳಿ ಹಬ್ಬ ಆಚರಿಸಲಾಗುತ್ತದೆ. ಅದರಂತೆ ನಮ್ಮ ಕರ್ನಾಟಕ ರಾಜ್ಯದಲ್ಲಿ ನವೆಂಬರ್ 1ರ ಶುಕ್ರವಾರ ಸಂಜೆ 5.36 ರಿಂದ 6.16 ರವರೆಗೆ ದೀಪಾವಳಿಯ ಪೂಜೆ ಸಲ್ಲಿಸಲಾಗುತ್ತದೆ. ದೀಪಾವಳಿ ದಿನಾಂಕ ಹಾಗೂ ಸಮಯದ ವಿವರ ಈ ಕೆಳಗಿನಂತಿದೆ.
- 29 ಅಕ್ಟೋಬರ್ 2024=ಧನತೇರಸ್
- 30 ಅಕ್ಟೋಬರ್ 2024 = ಕಾಳಿ ಚೌದಾಸ್
- 31 ಅಕ್ಟೋಬರ್ 2024 = ನರಕ ಚತುರ್ದಶಿ
- 1 ನವೆಂಬರ್ 2024 = ದೀಪಾವಳಿ
- 2 ನವೆಂಬರ್ 2024 = ಗೋವರ್ಧನ ಪೂಜೆ
- 3 ನವೆಂಬರ್ 2024 = ಬಾಯ್ ದೂಜ್
ನಾಡಹಬ್ಬದಂದು ದೀಪಾವಳಿ ಸಂಭ್ರಮ
ಬೆಳಕಿನ ಹಬ್ಬ ಈ ವರ್ಷ ನಾಡಹಬ್ಬ ಕನ್ನಡ ರಾಜ್ಯೋತ್ಸವದಂದು ಬಂದಿರುವುದು ಸಂಭ್ರಮ ಮತ್ತಷ್ಟು ಹೆಚ್ಚಿಸಿದೆ. ಕನ್ನಡ ರಾಜ್ಯೋತ್ಸವವನ್ನು ನಾಡಿನಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ನವೆಂಬರ್ 1 ಕನ್ನಡ ನಾಡಿನ ಜನರಿಗೆ ವಿಶೇಷ ದಿನ. ಅಂದು ಇಡೀ ನಾಡಿನ ಜನ ಕನ್ನಡ ದೇವಿಯ ಆರಾಧನೆ ಮಾಡುತ್ತಾರೆ. ಇದಕ್ಕೆ ಬೆಳಕಿನ ಹಬ್ಬ ಮತ್ತಷ್ಟು ಸಾಥ್ ನೀಡಲಿದೆ.