ರೈತರನ್ನು ಭಯೋತ್ಪಾದಕರು ಎಂದಿದ್ದ, ನಟಿ ಕಂಗನಾ ವಿರುದ್ಧ FIR ದಾಖಲು!

ಬೆಂಗಳೂರು : ಕೃಷಿ ಮಸೂದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಮಾಡುವ ರೈತರು ಭಯೋತ್ಪಾದಕರೆಂದು ಕರೆದಿದ್ದ ಬಾಲಿವುಡ್ ನಟಿ ಕಂಗನಾ ರನೌತ್‌ ವಿರುದ್ಧ FIR ದಾಖಲಿಸಲಾಗಿದೆ. ತುಮಕೂರಿನ ಕ್ಯಾತ್ಸಂದ್ರ ಠಾಣೆಯಲ್ಲಿ ತುಮಕೂರಿನ ಜೆ ಎಂ ಎಫ್…

kangana ranaut vijayaprabha

ಬೆಂಗಳೂರು : ಕೃಷಿ ಮಸೂದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಮಾಡುವ ರೈತರು ಭಯೋತ್ಪಾದಕರೆಂದು ಕರೆದಿದ್ದ ಬಾಲಿವುಡ್ ನಟಿ ಕಂಗನಾ ರನೌತ್‌ ವಿರುದ್ಧ FIR ದಾಖಲಿಸಲಾಗಿದೆ.

ತುಮಕೂರಿನ ಕ್ಯಾತ್ಸಂದ್ರ ಠಾಣೆಯಲ್ಲಿ ತುಮಕೂರಿನ ಜೆ ಎಂ ಎಫ್ ಸಿ ಕೋರ್ಟ್ ನಿರ್ದೇಶನದ ಮೇರೆಗೆ ಬಾಲಿವುಡ್ ನಟಿ ಕಂಗಾನ ರನೌತ್ ವಿರುದ್ಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.

ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟಿಸುವ ರೈತರನ್ನ ಭಯೋತ್ಪಾದಕರು ಎಂದು ನಿಂದಿಸಿ ನಟಿ ಕಂಗನಾ ರನೌತ್ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಇದನ್ನು ವಿರೋಧಿಸಿ ತುಮಕೂರಿನ ವಕೀಲ ರಮೇಶ್ ನಾಯ್ಕ್ ಎಂಬುವರು ಕಂಗನಾ ವಿರುದ್ಧ ದೂರು ನೀಡಿದ್ದರು. ಈ ದೂರಿನನ್ವಯ ನಟಿ ಕಂಗನಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ತುಮಕೂರಿನ ಜೆ ಎಂ ಎಫ್ ಸಿ ಕೋರ್ಟ್ ಪೊಲೀಸರಿಗೆ ಸೂಚನೆ ನೀಡುತ್ತು.

Vijayaprabha Mobile App free

ಕೋರ್ಟ್ ನಿರ್ದೇಶನದಂತೆ ವಕೀಲ ರಮೇಶ್ ನಾಯ್ಕ್ ದೂರಿನನ್ವಯ ನಟಿ ಕಂಗನಾ ರನೌತ್ ವಿರುದ್ಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 108, 153, 504, 44 ರ ಅಡಿ FIR ದಾಖಲಿಸಲಾಗಿದೆ.

ಇದನ್ನು ಓದಿ: ವಿವಾದಾತ್ಮಕ ಟ್ವೀಟ್: ಬಾಲಿವುಡ್ ನಟಿ ಕಂಗನಾ ರನೌತ್ ‌ಗೆ ಕರ್ನಾಟಕ ಕೋರ್ಟ್ ಶಾಕ್…!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.