ಕೋಲಾರದ ಅವನಿ ಶೃಂಗೇರಿ ಶಾಖಾ ಮಠದ ನೂತನ ಉತ್ತರಾಧಿಕಾರಿ ಪಟ್ಟಾಭಿಷೇಕ: ಕಿರಿಯ ಶ್ರೀ ನೇತೃತ್ವ

ಕೋಲಾರ: ಶೃಂಗೇರಿ ಮಠದ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಮುಳಬಾಗಿಲು ತಾಲೂಕಿನ ಅವನಿ ಶೃಂಗೇರಿ ಶಾಖಾ ಮಠದ ನೂತನ ಉತ್ತರಾಧಿಕಾರಿಯಾಗಿ ಶ್ರೀ ಅದ್ವೈತಾನಂದ ಭಾರತಿ ಸ್ವಾಮಿಗಳ ಪಟ್ಟಾಭಿಷೇಕ ಬುಧವಾರ ನಡೆಯಿತು.…

ಕೋಲಾರ: ಶೃಂಗೇರಿ ಮಠದ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಮುಳಬಾಗಿಲು ತಾಲೂಕಿನ ಅವನಿ ಶೃಂಗೇರಿ ಶಾಖಾ ಮಠದ ನೂತನ ಉತ್ತರಾಧಿಕಾರಿಯಾಗಿ ಶ್ರೀ ಅದ್ವೈತಾನಂದ ಭಾರತಿ ಸ್ವಾಮಿಗಳ ಪಟ್ಟಾಭಿಷೇಕ ಬುಧವಾರ ನಡೆಯಿತು.

ಅವನಿ ಶೃಂಗೇರಿ ಶಾರದಾ ಪೀಠಕ್ಕೆ ಸೇರಿದ ಮಠದಲ್ಲಿ ಶಾಸ್ತ್ರೋಕ್ತವಾಗಿ ಶೃಂಗೇರಿಯ ವಿಧುಶೇಖರ ಭಾರತೀ ಶ್ರೀಗಳ ಸಮ್ಮುಖದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿತು.
ಜುಲೈ ತಿಂಗಳಲ್ಲಿ ಸನ್ಯಾಸ ದೀಕ್ಷೆ ಹಾಗೂ ಉತ್ತರಾಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆದಿತ್ತು. ಅದರಂತೆ ಈಗ ಶೃಂಗೇರಿ ಕಿರಿಯ ಶ್ರೀಗಳ ಸಮ್ಮುಖದಲ್ಲಿ ನೂತನ ಉತ್ತರಾಧಿಕಾರಿಯ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿತು.

ವರ್ಷದ ಹಿಂದಷ್ಟೇ ಶ್ರೀಶಾಂತಾನಂದ ಭಾರತಿ ಸ್ವಾಮಿಗಳನ್ನು ಆವನಿ ಮಠದ ಉತ್ತರಾಧಿಕಾರಿಯಾಗಿ ನೇಮಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರ ಬದಲಿಗೆ ಇದೀಗ ನೂತನ ಉತ್ತರಾಧಿಕಾರಿಯಾಗಿ ಶ್ರೀ ಅದ್ವೈತಾನಂದ ಭಾರತಿ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿತು. ಆಂಧ್ರಪ್ರದೇಶದ ಕುಪ್ಪಂ ಸೇರಿ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಮಠದ ಭಕ್ತರ ಸಮ್ಮುಖದಲ್ಲಿ ಪಟ್ಟಾಭಿಷೇಕ ನೆರವೇರಿತು.

Vijayaprabha Mobile App free

ಸಂಸದ ಸುಧಾಕರ್‌ ಭರವಸೆ:

ಸಂಸದ ಡಾ.ಸುಧಾಕರ್‌ ಮಾತನಾಡಿ ಸನಾತನ ಧರ್ಮ ನಮಗೆ ಆಚಾರ, ವಿಚಾರ, ಎಲ್ಲವನ್ನೂ ಕೊಟ್ಟಿದೆ, ಇಂತಹ ಸನಾತನ ಧರ್ಮದ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ನನಗೆ ಇಲ್ಲಿನ ಮಠದ ಕುರಿತು ತಿಳಿದಿರಲಿಲ್ಲ. ಆದರೆ ಈಗ ಈ ಮಠದ ಮಹತ್ವ ಅರಿವಾಗಿದೆ. ಇಲ್ಲಿನ ಶ್ರೀಗಳ ಆದೇಶವನ್ನು ನಾನು ಪಾಲನೆ ಮಾಡುತ್ತೇನೆ. ಮಠಕ್ಕೆ ಬೇಕಾದ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಅಶ್ವತ್ಥ ನಾರಾಯಣ, ಅರವಿಂದ ಲಿಂಬಾವಳಿ ಸೇರಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.