Miracle: ವಿಜಯಪುರದಲ್ಲಿ ಜನಿಸಿದ ‘ಮುಕ್ಕಣ್ಣಿನ’ ಕರು!

ವಿಜಯಪುರ: ನಮ್ಮ ಊಹೆಗೂ ನಿಲುಕದ ವಿಸ್ಮಯಗಳು ಪ್ರತಿನಿತ್ಯ ನಮ್ಮ ಸುತ್ತಲಿನ ಪ್ರಕೃತಿಯಲ್ಲಿ ನಡೆಯುತ್ತಲೇ ಇರುತ್ತವೆ. ವಿಜ್ಞಾನ-ತಂತ್ರಜ್ಞಾನಕ್ಕೂ ಸವಾಲೆಸೆಯುವಂತಿರುವ ಇಂತಹ ವಿಸ್ಮಯಗಳು ಕಣ್ಣಿಗೆ ಗೋಚರವಾದಾಗ ಎಲ್ಲರ ಗಮನ ಸೆಳೆಯುತ್ತವೆ. ಅಂತಹುದೇ ಒಂದು ವಿಸ್ಮಯಕಾರಿ, ವಿಚಿತ್ರ ಘಟನೆಯೊಂದಕ್ಕೆ…

ವಿಜಯಪುರ: ನಮ್ಮ ಊಹೆಗೂ ನಿಲುಕದ ವಿಸ್ಮಯಗಳು ಪ್ರತಿನಿತ್ಯ ನಮ್ಮ ಸುತ್ತಲಿನ ಪ್ರಕೃತಿಯಲ್ಲಿ ನಡೆಯುತ್ತಲೇ ಇರುತ್ತವೆ. ವಿಜ್ಞಾನ-ತಂತ್ರಜ್ಞಾನಕ್ಕೂ ಸವಾಲೆಸೆಯುವಂತಿರುವ ಇಂತಹ ವಿಸ್ಮಯಗಳು ಕಣ್ಣಿಗೆ ಗೋಚರವಾದಾಗ ಎಲ್ಲರ ಗಮನ ಸೆಳೆಯುತ್ತವೆ. ಅಂತಹುದೇ ಒಂದು ವಿಸ್ಮಯಕಾರಿ, ವಿಚಿತ್ರ ಘಟನೆಯೊಂದಕ್ಕೆ ವಿಜಯಪುರ ಸಾಕ್ಷಿಯಾಗಿದೆ.

ತಾಲ್ಲೂಕಿನ ಬಾಬಾನಗರದ ನಿವಾಸಿ ಸಾವಿತ್ರಿ ಬಸವರಾಜ ನಾಗೂರಿ ಎಂಬುವವರ ಮನೆಯ ಹಸುವೊಂದು 3 ಕಣ್ಣುಗಳನ್ನು ಹೊಂದಿರುವ ಕರುವೊಂದಕ್ಕೆ ಜನ್ಮ ನೀಡಿದೆ. ಮೂರು ಕಣ್ಣು, ಎರಡು ನಾಲಿಗೆ ಹಾಗೂ ಎರಡು ಮೂಗುಗಳನ್ನು ಈ ಕರು ಹೊಂದಿದ್ದು, ಇದೀಗ ಗ್ರಾಮಸ್ಥರ ಅಚ್ಚರಿಯ ಕೇಂದ್ರಬಿಂದುವಾಗಿದೆ.

ವಿಚಿತ್ರ ಕರುವಿನ ಜನನದ ಬಳಿಕ ಮನೆಯವರು ಪಶು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ವೈದ್ಯರು ಕರುವನ್ನು ಪರಿಶೀಲನೆ ನಡೆಸಿದ್ದಾರೆ. ಸದ್ಯ ಕರುವಿನ ಆರೋಗ್ಯ ಸ್ಥಿರವಾಗಿದ್ದು ಯಾವುದೇ ತೊಂದರೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಈ ಹಿಂದೆಯೂ ಸಹ ರಾಜ್ಯದ ವಿವಿಧೆಡೆ ಮೂರು ಕಣ್ಣು, ಎರಡು ತಲೆಯಂತಹ ವಿಚಿತ್ರ ದೇಹರೂಪವನ್ನು ಹೊಂದಿದ ಕರುಗಳ ಜನನವಾಗಿದೆ. 

Vijayaprabha Mobile App free

ಆದರೆ ವಿಜಯಪುರದಲ್ಲಿ ಈ ರೀತಿಯ ಕರು ಜನನವಾಗಿರುವುದು ಸುತ್ತಮುತ್ತಲಿನ ಜನರ ಕುತೂಹಲಕ್ಕೆ ಕಾರಣವಾಗಿದ್ದು, ಅಕ್ಕಪಕ್ಕದ ಗ್ರಾಮಗಳ ಜನರೂ ಸಹ ಇದೀಗ ವಿಚಿತ್ರ ಕರುವನ್ನು ವೀಕ್ಷಣೆ ಮಾಡಲು ಸಾವಿತ್ರಿ ಬಸವರಾಜ್ ಅವರ ಮನೆಗೆ ಮುಗಿಬಿದ್ದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.