ಬೆಂಗಳೂರು: ತಂದೆಯೇ ಮಗನ ಕೈ ಕಾಲು ಕಟ್ಟಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಿಂಗಪ್ಪ ಎಂಬಾತನೇ ಕೊಲೆ ಮಾಡಿದ ತಂದೆಯಾಗಿದ್ದು, ರಾಜೇಶನೇ ತಂದೆಯಿಂದ ಕೊಲೆಗೀಡಾದ ಮಗ. ಪ್ರತಿನಿತ್ಯ ಮನೆಗೆ ಕುಡಿದು ಬರುತ್ತಿದ್ದ ರಾಜೇಶನ ಕಿರುಕುಳ ತಾಳಲಾರದೇ ಲಿಂಗಪ್ಪ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದರು. ಆದರೆ ಅಲ್ಲಿಗೂ ಬಂದ ರಾಜೇಶ್, ಪಾಲಕರ ಮೇಲೆಯೇ ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಲು ಮುಂದಾಗಿದ್ದಾನೆ.
ಮಗನ ಕಾಟ ತಾಳಲಾರದೆ ಆತಬ ಕೈಕಾಲು ಕಟ್ಟಿ ಆಯುಧಗಳಿಂದ ಲಿಂಗಪ್ಪ ಕೊಲೆ ಮಾಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.