ಪ್ರಯಾಣಿಕರಿಗೆ ಶೀಘ್ರ ಮುಕ್ತವಾಗಲಿದೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ರೋಡ್: ಪ್ರಯಾಣ ಸಮಯ ಉಳಿತಾಯ

ಬೆಂಗಳೂರು: ದಕ್ಷಿಣ ಭಾರತದ 2 ಮಹಾನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿತಗೊಳಿಸುವ ‘ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ’ (ಬಿಸಿಇ) ಕರ್ನಾಟಕ ಭಾಗದ 71 ಕಿ.ಮೀ ಉದ್ದದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇನ್ನೊಂದು ತಿಂಗಳಲ್ಲಿ ಪ್ರಯಾಣಿಕರ ವಾಹನಗಳ ಸಂಚಾರಕ್ಕೆ…

ಬೆಂಗಳೂರು: ದಕ್ಷಿಣ ಭಾರತದ 2 ಮಹಾನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿತಗೊಳಿಸುವ ‘ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ’ (ಬಿಸಿಇ) ಕರ್ನಾಟಕ ಭಾಗದ 71 ಕಿ.ಮೀ ಉದ್ದದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇನ್ನೊಂದು ತಿಂಗಳಲ್ಲಿ ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಹೊಸಕೋಟೆ ಸಮೀಪದ ದೇವಸ್ಥಾನವೊಂದನ್ನು ಸ್ಥಳಾಂತರ ಮಾಡಬೇಕಿದ್ದ ಕಾರಣ ಸುಮಾರು 400 ಮೀ. ಉದ್ದದ ಮಾರ್ಗದ ಕಾಮಗಾರಿ ಬಾಕಿ ಉಳಿದಿತ್ತು. ಇತ್ತೀಚೆಗೆ ಅದನ್ನೂ ಸ್ಥಳಾಂತರಗೊಳಿಸಿರುವುದರಿಂದ ಮುಂದಿನ 1 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.
ರಾಜ್ಯ ಭಾಗದ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಬೆಂಗಳೂರಿನಿಂದ ಮಾಲೂರು, ಬಂಗಾರಪೇಟೆ, ಕೆಜಿಎಫ್‌ ಕಡೆ ತೆರಳುವ ಪ್ರಯಾಣಿಕರು ಎಕ್ಸ್‌ಪ್ರೆಸ್‌ವೇ ಬಳಸಬಹುದು. ಈ ಮಾರ್ಗದ ಟೋಲ್ ದರ ಅಂತಿಮಗೊಂಡಿಲ್ಲ. ಆಂಧ್ರಪ್ರದೇಶ ಮತ್ತು ತಮಿಳುನಾಡು ಭಾಗದ ಕಾಮಗಾರಿಯು ಪೂರ್ಣಗೊಂಡರೆ ವಾಹನಗಳ ಸಂಚಾರ ಉತ್ತಮಗೊಳ್ಳುತ್ತದೆ. ಈ 2 ರಾಜ್ಯಗಳಲ್ಲಿ ಕಾಮಗಾರಿ 2025ರ ಏಪ್ರಿಲ್ ವೇಳೆಗೆ ಮುಗಿಯಬಹುದು ಎಂದು ಅಂದಾಜಿಸಲಾಗಿದೆ.

ಗಂಟೆಗೆ 120 ಕಿಮೀ ವೇಗ:

ಪ್ರತಿ ಗಂಟೆಗೆ ಗರಿಷ್ಠ 120 ಕಿ.ಮೀ ವೇಗದಲ್ಲಿ ವಾಹನಗಳು ಸಂಚರಿಸುವಂತೆ ರಸ್ತೆಯನ್ನು ವಿನ್ಯಾಸಗೊಳಿಸಲಾಗಿದೆ. ಆದರೆ, 100 ಕಿ.ಮೀ ವೇಗದಲ್ಲಿ ವಾಹನ ಸಂಚಾರಕ್ಕೆ ಅನುಮತಿ ಸಿಗಬಹುದು. ಹೊಸಕೋಟೆ ಬಳಿಯ ಸ್ಯಾಟಲೈಟ್ ರಿಂಗ್ ರಸ್ತೆ ಸೇರುವ ಸ್ಥಳದಿಂದ ಎಕ್ಸ್‌ಪ್ರೆಸ್‌ವೇ ಪ್ರಾರಂಭವಾಗುತ್ತದೆ. ಬಂಗಾರಪೇಟೆ ಮಾಲೂರು ಮತ್ತು ಕೆಜಿಎಫ್‌ ಬಳಿ ಇಂಟರ್‌ಚೇಂಜ್ ಇರಲಿವೆ. ಹಾಲಿ ಇರುವ ಹೆದ್ದಾರಿಯಲ್ಲಿ ತೆರಳಿದರೆ ಈ ಮಾರ್ಗ ಕ್ರಮಿಸಲು ಒಂದೂವರೆ ಗಂಟೆ ಬೇಕು. ಎಕ್ಸ್‌ಪ್ರೆಸ್‌ವೇನಲ್ಲಿ ಕೇವಲ ಮುಕ್ಕಾಲು ಗಂಟೆ ಸಾಕು.

Vijayaprabha Mobile App free

ಇನ್ಮುಂದೆ ಮೂರೂವರೆ ಗಂಟೆ ಪ್ರಯಾಣ:

ಸಂಪೂರ್ಣವಾಗಿ ಹೊಸದಾಗಿ (ಗ್ರೀನ್‌ಫೀಲ್ಡ್‌) ಜಮೀನು ಖರೀದಿಸಿ ನಿರ್ಮಿಸಿರುವ ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕದಿಂದ ಆಂಧ್ರಪ್ರದೇಶ ಮಾರ್ಗವಾಗಿ ತಮಿಳುನಾಡು ಮೂಲಕ ಚೆನ್ನೈನ ಶ್ರೀಪೆರಂಬೂರಿನಲ್ಲಿ ಮುಕ್ತಾಯಗೊಳ್ಳಲಿದೆ. ಹಾಲಿ ಈ 2 ಮಹಾನಗರಗಳ ನಡುವಿನ ಅಂತರ 350 ಕಿ.ಮೀ ಇದೆ. ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದ 280 ಕಿ.ಮೀಗೆ ಇಳಿಕೆಯಾಗಲಿದೆ. ಹಾಲಿ ಇರುವ ಹೆದ್ದಾರಿಗಳಲ್ಲಿ 2 ನಗರ ನಡುವೆ ಕ್ರಮಿಸಲು ಐದೂವರೆ ತಾಸು ಬೇಕು. ಎಕ್ಸ್‌ಪ್ರೆಸ್‌ವೇನಲ್ಲಿ ಕೇವಲ ಮೂರುವರೆ, ನಾಲ್ಕು ತಾಸಲ್ಲಿ ತಲುಪಬಹುದಾಗಿದೆ. 2011ರಲ್ಲಿ ಯೋಜನೆ ಘೋಷಣೆಯಾಗಿತ್ತು. 2022ರಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. 2024ರ ಅಕ್ಟೋಬರ್ ವೇಳೆಗೆ ಇಡೀ ಕಾಮಗಾರಿ ಪೂರ್ಣಗೊಳಿಸುವ ಗುರಿ ಇತ್ತು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.